ಕೀವ್, ಸೆ 03 (DaijiworldNews/PY): ಸೆಕೆ ಆಗುತ್ತಿದೆ ಎನ್ನುವ ಕಾರಣದಿಂದ ಮಹಿಳೆಯೋರ್ವರು ವಿಮಾಣದ ಎಮರ್ಜೆನ್ಸಿ ಡೋರ್ ತೆಗೆದ ಘಟನೆ ಉಕ್ರೇನ್ನ ಕೀವ್ನಲ್ಲಿ ನಡೆದಿದೆ.
ವಿಮಾನವು ನಿಲ್ದಾಣಕ್ಕೆ ಬಂದಿಳಿದರೂ ಕೂಡಾ ಸಹಪ್ರಯಾಣಿಕರು ಬೇಗ ವಿಮಾನದಿಂದ ಇಳಿಯುತ್ತಿಲ್ಲ ಎನ್ನುವ ಕಾರಣದಿಂದ ತುರ್ತು ದ್ವಾರ ತೆಗೆದು ನುಸುಳಿದ್ದಾರೆ. ಅಲ್ಲದೇ ತುಂಬಾ ಸೆಕೆಯಾಗುತ್ತಿದೆ ಎನ್ನುವ ಕಾರಣದಿಂದ ವಿಮಾನದ ವಿಂಗ್ ಮೇಲೆ ಒಂದೇ ಸಮನೆ ನಡೆದಾಡಿದ್ದಾರೆ.
ಬೋಯಿಂಗ್ 737-86ಎನ್ ವಿಮಾನದ ಮೂಲಕ ತನ್ನ ಇಬ್ಬರು ಮಕ್ಕಳೊಂದಿಗೆ ಟರ್ಕಿಯಿಂದ ಬಂದ ಮಹಿಳೆ ವಿಮಾನದ ವಿಂಗ್ ಮೇಲೆ ನಡೆದಾಡಿದ್ದಾಳೆ.
ಈ ವೇಳೆ ವಿಮಾನದಿಂದ ಇಳಿಯುತ್ತಿದ ಸಹಪ್ರಯಾಣಿಕರು ಈಕೆಯನ್ನು ನೋಡಿ ಗಾಬರಿಯಿಂದ ವಿಮಾನ ನಿಲ್ದಾಣದ ಸಿಬ್ಬಂದಿಗಳಿಗೆ ತಿಳಿಸಿದ್ದಾರೆ.
ತಾಯಿ ಈ ರೀತಿಯಾಗಿ ಮಾಡುತ್ತಿರುವದನ್ನು ಕಂಡ ಮಕ್ಕಳಿಗೆ ಇದು ತಮ್ಮ ತಾಯಿಯೇ ಎಂದು ಆಶ್ಚರ್ಯಕ್ಕೊಳಗಾಗಿದ್ದಾರೆ. ಬಳಿಕ ಮಹಿಳೆಯ ನಾರ್ಕೋಟಿಕ್ ಪರೀಕ್ಷೆ ನಡೆಸಿದ್ದು, ಈಕೆ ಮದ್ಯ ಅಥವಾ ಮಾದಕ ದ್ರವ್ಯವನ್ನು ಸೇವಿಸಿರಲಿಲ್ಲ ಎಂದು ತಿಳಿದುಬಂದಿದೆ.
ಈ ಬಗ್ಗೆ ಪೊಲೀಸರು ಆಕೆಯ ವಿಚಾರಣೆ ನಡೆಸಿದ್ದು, ತನ್ನ ಬಾಧೆಯನ್ನು ತಿಳಿಸಿದ್ದಾಳೆ. ಆಕೆಗೆ ಉಕ್ರೇನ್ ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ಮಾಡದಂತೆ ನಿರ್ಬಂಧ ಹೇರಲಾಗಿದೆ.