ನ್ಯೂಯಾರ್ಕ್, ಸೆ 04 (DaijiworldNews/PY): 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ವೇಳೆ ಅಮೆರಿಕದ ಪೌರತ್ವ ಹೊಂದಿದ್ದೇವೆ ಎಂದು ಸುಳ್ಳು ಹೇಳಿ ಕಾನೂನುಬಾಹಿರವಾಗಿ ಮತ ಚಲಾಯಿಸಿದ್ದಾರೆ ಎಂದು ಆರೋಪಿಸಿ ಒಬ್ಬ ಭಾರತೀಯ, ಮತ್ತೊಬ್ಬ ಭಾರತೀಯ ಮೂಲದ ಮಲೇಷ್ಯಾದ ವ್ಯಕ್ತಿ ಸೇರಿದಂತೆ ಒಟ್ಟು ಹನ್ನೊಂದು ವಿದೇಶಿ ವ್ಯಕ್ತಿಗಳ ವಿರುದ್ದ ಆರೋಪ ಮಾಡಲಾಗಿದೆ.
2016 ಅಧ್ಯಕ್ಷೀಯ ಚುನಾವಣೆಯಲ್ಲಿ ಕಾನೂನುಬಾಹಿರವಾಗಿ ಮತ ಚಲಾಯಿಸಿದ ಆರೋಪದ ಮೇಲೆ ಕಳೆದ ತಿಂಗಳು ಉತ್ತರ ಕೆರೊಲಿನಾದ ಮಿಡ್ಲ್ ಡಿಸ್ಟ್ರಿಕ್ನ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ಸಂದರ್ಭ ಭಾರತದ ಬೈಜೂ ಪೊಟಕುಲತ್ ಥೋಮಸ್ (58), ಮಲೇಷ್ಯಾ ಮೂಲದ ರೂಬ್ ಕೌರ್ ಅತಾರ್-ಸಿಂಗ್ (57) ಹಾಗೂ 11 ಇತರ ವಿದೇಶಿ ಪ್ರಜೆಗಳ ವಿರುದ್ದ ಫೆಡರಲ್ ಸರ್ಕಾರದ ಪರ ವಕೀಲರು ಅಮೆರಿಕದ ಜಿಲ್ಲಾ ನ್ಯಾಯಾಲಯದಲ್ಲಿ ಆರೋಪ ಮಾಡಲಾಗಿತ್ತು.
ಈ ಬಗ್ಗೆ ಆರೋಪ ಸಾಬೀತಾದಲ್ಲಿ, ಇವರಿಗೆ ಗರಿಷ್ಠ ಒಂದು ವರ್ಷದ ಜೈಲು ಶಿಕ್ಷೆ ಹಾಗೂ 1 ಲಕ್ಷ ಅಮರಿಕನ್ ಡಾಲರ್ ದಂಡ ಪಾವತಿ ಮಾಡಬೇಕಾಗುತ್ತದೆ ಎಂದು ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿನಿರ್ದೇಶನಾಲಯ ಹೋಮ್ ಲ್ಯಾಂಡ್ ಸೆಕ್ಯುರಿಟಿ ಇನ್ವೆಸ್ಟಿಗೇಷನ್ ಸಂಸ್ಥೆ ಹೇಳಿದೆ.
ಅಮೆರಿಕದ ಕಾನೂನಿನಡಿ, ಅಮೆರಿಕದ ಪೌರತ್ವವನ್ನು ಹೊಂದಿರದ ನಾಗರಿಕರು, ಮತ ಚಲಾಯಿಸಲು ಅಥವಾ ಫೆಡರಲ್ ಚುನಾವಣೆಯಲ್ಲಿ ಮತಚಲಾಯಿಸಲು ಸಾಧ್ಯವಿಲ್ಲ.