ಮಾಸ್ಕೋ, ಸೆ.05(DaijiworldNews/HR): ಮಾಸ್ಕೋದಲ್ಲಿ ನಡೆದ ಸಭೆಯಲ್ಲಿ ಚೀನಾದ ರಕ್ಷಣಾ ಸಚಿವ ವೇ ಫೆಂಗ್ ಅವರ ಜೊತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗಡಿ ಸಂಘರ್ಷಣೆಯ ನಡುವೆ ಮಾತುಕತೆ ನಡೆಸಿದ್ದು,ಲಡಾಖ್ ನಲ್ಲಿ ನಡೆದ ಘಟನೆಯ ಜವಾಬ್ಧಾರಿ ಸಂಪೂರ್ಣವಾಗಿ ಭಾರತದ ಮೇಲಿದೆ ಎಂದು ಚೀನಾದ ರಕ್ಷಣಾ ಸಚಿವ ಹೇಳಿದ್ದಾರೆ.
ಈ ಗಡಿ ಸಮಸ್ಯೆಯಿಂದಾಗಿ ಎರಡು ದೇಶಗಳು ಮತ್ತು ಮಿಲಿಟರಿ ನಡುವಿನ ಸಂಬಂಧಗಳು ತೀವ್ರವಾಗಿ ಪರಿಣಾಮ ಬೀರಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಭಾರತೀಯ ನಿಯೋಗಕ್ಕೆ ವೀ ಫೆಂಗೆ ತಿಳಿಸಿದ್ದಾರೆ. ಚೀನಾ ಮತ್ತು ಭಾರತದ ಗಡಿಯಲ್ಲಿ ಸಮಸ್ಯೆಗೆ ಕಾರಣ ಮತ್ತು ಸತ್ಯ ಬಹಳ ಸ್ಪಷ್ಟವಾಗಿದೆ ಮತ್ತು ಜವಾಬ್ದಾರಿ ಸಂಪೂರ್ಣವಾಗಿ ಭಾರತದ ಮೇಲಿದೆ ಎಂದು ಚೀನಾ ರಕ್ಷಣಾ ಸಚಿವಾಲಯ ಸೂಚಿಸಿದೆ.
ಚೀನಾದ ಭೂಪ್ರದೇಶವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ, ಮತ್ತು ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡುವಲ್ಲಿ ಚೀನಾದ ಮಿಲಿಟರಿ ಸಂಪೂರ್ಣ ಸಾಮರ್ಥ್ಯ ಮತ್ತು ವಿಶ್ವಾಸ ಹೊಂದಿದೆ. ಅಧ್ಯಕ್ಷ ಜಿನ್ಪಿಂಗ್ ಮತ್ತು ಪ್ರಧಾನಿ ಮೋದಿಯವರ ಒಪ್ಪಂದವನ್ನು ಎರಡೂ ಕಡೆಯವರು ಶ್ರದ್ಧೆಯಿಂದ ಕಾರ್ಯಗತಗೊಳಿಸಬೇಕು ಮತ್ತು ಸಂವಾದದ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯಿಸಬೇಕು ಎಂದು ತಿಳಿಸಿದ್ದಾರೆ.