ಲಂಡನ್, ಸೆ 06 (DaijiworldNews/PY): ಶನಿವಾರ ಮಧ್ಯರಾತ್ರಿ ಬರ್ಮಿಂಗ್ಹ್ಯಾಮ್ನ ಹಲವು ಕಡೆ ಜನರು ಇರಿತಕ್ಕೆ ಒಳಗಾಗಿದ್ದು, ಘಟನೆಗೆ ಕಾರಣ ತಿಳಿದುಬಂದಿಲ್ಲ.
ಇನ್ನು ಈ ಪ್ರಕರಣವನ್ನು ಪ್ರಮುಖ ಘಟನೆಯೆಂದು ಭಾನುವಾರ ಘೋಷಣೆ ಮಾಡಿದ್ದು, ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಈ ಘಟನೆಯಲ್ಲಿ ಹಲವು ಮಂದಿ ಇರಿತಕ್ಕೊಳಗಾಗಿದ್ದಾರೆ. ಆದರೆ, ಎಷ್ಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿಲ್ಲ. ಗಾಯಗೊಂಡಿರವವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನೆಯ ಹೇಗೆ ನಡೆದಿದೆ ಎಂಬ ಬಗ್ಗೆ ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಬಿರ್ಮಿಂಗ್ ಹ್ಯಾಮ್ನ ಹಲವು ಕಡೆ ತುರ್ತು ಘೋಷಣೆ ಹೊರಡಿಸಲಾಗಿದ್ದು, ಘಟನೆ ನಡೆದ ಸ್ಥಳದಿಂದ ದೂರವಿರುವಂತೆ ಸಾರ್ವಜನಿಕರಿಗೆ ಪೊಲೀಸರು ಮನವಿ ಮಾಡಿದ್ದಾರೆ.