ಕಾಬೂಲ್, ಸೆ 09 (DaijiworldNews/PY): ಕಾಬೂಲ್ನಲ್ಲಿ ದೇಶದ ಉಪಾಧ್ಯಕ್ಷರನ್ನು ಗುರಿಯಾಗಿಸಿಕೊಂಡು ಬುಧವಾರ ನಡೆದ ಬಾಂಬ್ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.
ಇನ್ನು ಇಲ್ಲಿಯವರೆಗೆ ದಾಳಿಯ ಹೊಣೆಯನ್ನು ಯಾವ ಸಂಘಟನೆಯೂ ಹೊತ್ತುಕೊಂಡಿಲ್ಲ. ಈ ನಡುವೆ ತಾಲಿಬಾನ್ ಉಗ್ರ ಸಂಘಟನೆ ದಾಳಿ ನಡೆಸಿಲ್ಲ ಎಂದಿದೆ.
ದಾಳಿಯಲ್ಲಿ ಉಪಾಧ್ಯಕ್ಷ ಅಮರುಲ್ಲಾ ಸಲೇಗ್ ಅವರಿಗೆ ಯಾವುದೇ ತೊಂದರೆಯಾಗಿಲ್ಲ. ಅವರ ಬೆಂಗಾವಲು ವಾಹನವನ್ನು ಗುರಿಯಾಗಿಸಿಕೊಂಡು ಈ ದಾಳಿಯನ್ನು ನಡೆಸಿದ್ದಾರೆ ಎಂದು ಆಫ್ಗಾನಿಸ್ತಾನದ ವಕ್ತಾರ ರಜ್ವಾನ್ ಮುರಾದ್ ಹೇಳಿದ್ದಾರೆ.
ಈ ಬಾಂಬ್ ದಾಳಿಯಿಂದ ನನಗೆ ಏನೂ ತೊಂದರೆಯಾಗಿಲ್ಲ. ಆದರೆ, ಸಣ್ಣ ಗಾಯಗಳಾಗಿವೆ ಎಂದು ಸಲೇಗ್ ತಿಳಿಸಿದ್ದಾರೆ.
ಈ ದಾಳಿಯ ಬಗ್ಗೆ ಖಂಡಿಸಿರುವ ಭಾರತ, ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವಲ್ಲಿ ಹಾಗೂ ಭಯೋತ್ಪಾದನೆ ವಿರುದ್ದದ ಹೋರಾಟದಲ್ಲಿ ಭಾರತ ಜೊತೆಗಿದೆ ಎಂದು ವಿದೇಶಾಂಗ ಸಚಿವಾಲಯದ ಪ್ರಕಟಣೆಯಲ್ಲಿ ವಿವರಿಸಿದೆ.