ವಿಶ್ವ ಸಂಸ್ಥೆ, ಸೆ 12(DaijiworldNews/PY): ವಿಶ್ವ ಸಂಸ್ಥೆಯ ಮಹಾ ಅಧಿವೇಶನದಲ್ಲಿ ಕೊರೊನಾ ವೈರಸ್ ಸಂಬಂಧ ನಡೆದ ತೀಮಾ೯ನದ ಪರವಾಗಿ ಭಾರತ ಸೇರಿದಂತೆ 168 ರಾಷ್ಟ್ರಗಳು ಮತಚಲಾಯಿಸಿವೆ.
ವಿಶ್ವ ಸಂಸ್ಥೆಯ ಮಹಾ ಅಧಿವೇಶನದಲ್ಲಿ ಕೊರೊನಾ ವೈರಸ್ ಸಂಬಂಧ ನಡೆದ ತೀಮಾ೯ನದ ಪರವಾಗಿ ನಡೆದ ನಿಣ೯ಯಕ್ಕೆ ಅಮೆರಿಕ ಹಾಗೂ ಇಸ್ರೇಲ್ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಎರಡು ರಾಷ್ಟ್ರಗಳು ನಿಣ೯ಯದ ವಿರುದ್ಧ ಮತ ಚಲಾಯಿಸಿವೆ.
ಏತನ್ಮಧ್ಯೆ, ಉಕ್ರೇನ್ ಹಾಗೂ ಹಂಗೇರಿ ಮತ ಚಲಾಯಿಸಿಲ್ಲ. ಶುಕ್ರವಾರ ನಡೆದ ಈ ನಿಣ೯ಯದಲ್ಲಿ 193 ಸದಸ್ಯ ಬಲದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂಗೀಕಾರ ಮಾಡಲಾಯಿತು. ಅಲ್ಲದೆ, ಈ ನಿಣ೯ಯದ ಪರವಾಗಿ 169 ರಾಷ್ಟ್ರಗಳು ಮತಚಲಾಯಿಸಿದವು.
ಈ ಬಗ್ಗೆ ಟ್ವೀಟ್ ಮಾಡಿರುವ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಉಪಪ್ರತಿನಿಧಿ ಕೆ. ನಾಗರಾಜ್ ನಾಯ್ಡು ಅವರು, ಭಾರತವು ಕೊರೊನಾ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ತೀಮಾ೯ನದ ಪರವಾಗಿ ಮತ ಚಲಾಯಿಸಿದೆ ಎಂದು ತಿಳಿಸಿದರು.