ದುಬೈ, ಸೆ 13(DaijiworldNews/PY): ಭಾರತ ಮೂಲದ ವ್ಯಕ್ತಿಯೋವ೯ ತನಗೆ ಸಿಕ್ಕಿದ್ದ ಹಣ ಹಾಗೂ ಚಿನ್ನವಿದ್ದ ಬ್ಯಾಗ್ ಅನ್ನು ಪೊಲೀಸರಿಗೆ ಹಿಂದಿರುಗಿಸಿದ್ದು, ಈತನಿಗೆ ಯುಎಇ ಪೊಲೀಸರು ಗೌರವಿಸಿದ್ದಾರೆ.
ರಿತೇಶ್ ಜೇಮ್ಸ್ ಗುಪ್ತಾ ಎಂಬವರು 14,000 ಯುಎಸ್ ಡಿ ಡಾಲರ್ ಹಾಗೂ 54,452 (40 ಲಕ್ಷ) ಮೌಲ್ಯದ ಬ್ಯಾಗ್ ಅನ್ನು ಹಿಂದಿರುಗಿಸಿದ್ದಾರೆ. ಇವರ ಪ್ರಾಮಾಣಿಕತೆಯನ್ನು ಮೆಚ್ಚಿದ ದುಬೈ ಪೊಲೀಸರು ಅವರನ್ನು ಶ್ಲಾಘಿಸಿ, ಅವರಿಗೆ ಪ್ರಮಾಣಪತ್ರ ನೀಡಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಬ್ರಿಗೇಡಿಯರ್ ಯೂಸೆಫ್ ಅಬ್ದುಲ್ಲಾ ಸಲೀಂ ಅಲ್ ಅದಿದಿ ಅವರು ಪೊಲೀಸ್ ಠಾಣೆಯಲ್ಲಿ ರಿತೇಶ್ ಜೇಮ್ಸ್ ಗುಪ್ತಾ ಅವರಿಗೆ ಪ್ರಶಸ್ತಿ ನೀಡಿದ್ದಾರೆ.
ಬ್ಯಾಗ್ ಯಾರದ್ದು ಎಂದು ತಿಳಿದುಬಂದಿಲ್ಲ. ತನಗೆ ಪ್ರಶಸ್ತಿ ನೀಡಿದ್ದಕ್ಕಾಗಿ ಪೊಲೀಸರಿಗೆ ಧನ್ಯವಾದ ತಿಳಿಸಿದ ಅವರು, ನನಗೆ ಹೆಮ್ಮೆ ಹಾಗೂ ಸಂತೋಷ ನೀಡಿದೆ ಎಂದು ತಿಳಿಸಿದ್ದಾರೆ.