ವಾಷಿಂಗ್ಟನ್, ಸೆ.20 (DaijiworldNews/HR): ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರಲ್ಲಿ ಶ್ವೇತಭವನಕ್ಕೆ ಅನಾಮಿಕ ಪತ್ರವೊಂದು ತಲುಪಿದ್ದು, ಈ ಪತ್ರದಲ್ಲಿ ಹಾನಿಕಾರಕ ರಿಕಿನ್ ವಿಷವಿರುವುದನ್ನು ಸಿಬ್ಬಂದಿ ಪತ್ತೆ ಮಾಡಿರುವುದಾಗಿ ತಿಳಿದು ಬಂದಿದೆ.
ಈ ಅನಾಮಿಕ ಪತ್ರವು ಕೆನಡಾದಿಂದ ಬಂದಿದೆ ಎನ್ನಲಾಗಿದ್ದು, ಅದರ ಲಕೋಟೆಯನ್ನು ಪರಿಶೀಲನೆಗೆ ಒಳಪಡಿಸಿದಾಗ, ಅದರಲ್ಲಿ ರಿಕಿನ್ ವಿಷದ ಅಂಶ ಇರುವುದು ಪತ್ತೆಯಾಗಿದೆ.
ಟ್ರಂಪ್ ಹೆಸರಲ್ಲಿ ಬಂದ ಈ ಪತ್ರದ ಕುರಿತು ಅನುಮಾನ ಬಂದ ಕೂಡಲೇ ಪತ್ರವನ್ನು ವಶಪಡಿಸಿಕೊಂಡ ಯುಎಸ್ ಸಿಕ್ರೇಟ್ ಸರ್ವೀಸ್ ಅಧಿಕಾರಿಗಳು, ಪರಿಶೀಲನೆ ನಡೆಸಿದಾಗ ರಿಕಿನ್ ವಿಷಯದ ಅಂಶಗಳು ಪತ್ತೆಯಾಗಿವೆ.
ಅಧ್ಯಕ್ಷೀಯ ಚುನಾವಣೆಗೂ ಮೊದಲೇ ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡು, ಶ್ವೇತಭವನಕ್ಕೆ ರಿಕಿನ್ ವಿಷದ ಅಂಶವಿರುವ ಪತ್ರವನ್ನು ರವಾನಿಸಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಅಲ್ಲದೇ 2014ರಲ್ಲಿ ಅಂದಿನ ಅಧ್ಯಕ್ಷ ಬರಾಕ್ ಒಬಾಮಾ ಹೆಸರಲ್ಲಿ ರಿಕಿನ್ ವಿಷಲೇಪಿತ ಪತ್ರಗಳನ್ನು ರವಾನಿಸಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು.