ನ್ಯೂಯಾರ್ಕ್, ಸೆ 22(Daijiworld News/PY): ವಿಶ್ವಸಂಸ್ಥೆಗೆ 75 ವರ್ಷ ತುಂಬಿದ ಸ್ಮರಣಾರ್ಥದ ಹಿನ್ನೆಲೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪಾಕಿಸ್ತಾನವು ಜಮ್ಮು-ಕಾಶ್ಮೀರದ ವಿಷಯ ಪ್ರಸ್ತಾಪಿಸಿದ್ದು, ಇದಕ್ಕೆ ಭಾರತ ತಿರುಗೇಟು ನೀಡಿದೆ.
ಇಸ್ಲಾಮಾಬಾದ್ ಭಯೋತ್ಪಾದಕರಿಗೆ ಕೇಂದ್ರಬಿಂದುವಾಗಿದ್ದು ಹಾಗೂ ಭಯೋತ್ಪಾದಕರಿಗೆ ಆಶ್ರಯ ಹಾಗೂ ತರಬೇತಿ ನೀಡುವ ಭಯೋತ್ಪಾದನೆಯ ಕೇಂದ್ರಬಿಂದುವಾಗಿ ಜಾಗತಿಕವಾಗಿ ಗುರುತಿಸಲ್ಪಟ್ಟಿದೆ ಎಂದು ಹೇಳಿದ್ದಾರೆ. ಆ ದೇಶವು ಉಗ್ರರನ್ನು ಹುತಾತ್ಮರಾಗಿ ಕರೆಯುತ್ತದೆ. ಅಲ್ಲದೇ, ಜನಾಂಗೀಯ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರನ್ನು ನಿರಂತರವಾಗಿ ಹಿಂಸಿಸುತ್ತದೆ ಎಂದು ತಿಳಿಸಿದೆ.
ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ವಿಚಾರವನ್ನು ಪ್ರಸ್ತಾಪ ಮಾಡಿದ್ದು, ವಿಶ್ವಸಂಸ್ಥೆಯ ಭಾರತದ ಕಾರ್ಯದರ್ಶಿ ವಿಧಿಶಾ ಮೈತ್ರಾ ಪಾಕ್ಗೆ ತಿರುಗೇಟು ನೀಡಿದ್ದಾರೆ. ಖುರೇಷಿಯವರ ಭಾಷಣವನ್ನು ಭಾರತದ ಆಂತರಿಕ ವ್ಯವಹಾರಗಳ ಬಗ್ಗೆ ಎಂದಿಗೂ ಮುಗಿಯದ ಕಲ್ಪಿತ ನಿರೂಪಣೆ ಎಂದಿದ್ದಾರೆ.
ಪಾಕಿಸ್ತಾನದ ಪ್ರತಿನಿಧಿ ನೀಡಿದ ಹೇಳಿಕೆಗೆ ಉತ್ತರಿಸುವ ಹಕ್ಕನ್ನು ನಾನು ಬಳಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.