ವಿಶ್ವಸಂಸ್ಥೆ, ಸೆ 26(DaijiworldNews/PY): ವಿಶ್ವಸಂಸ್ಥೆಯ 75ನೇ ಮಹಾ ಅಧಿವೇಶನದ ಸಾಮಾನ್ಯ ಸಭೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಷಣ ಮಾಡುವ ವೇಳೆ ಭಾರತದ ಬಗೆಗಿನ ಟೀಕೆಗಳನ್ನು ವಿರೋಧಿಸಿ ಭಾರತದ ಪ್ರತಿನಿಧಿ ಸಭಾತ್ಯಾಗ ಮಾಡಿದ್ದಾರೆ.
ಶುಕ್ರವಾರ ವಿಡಿಯೋ ಕಾನ್ಫರೆನ್ಸ್ನ ಮೂಲಕ ಇಮ್ರಾನ್ ಅವರು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿ ವಿರುದ್ದ ನಿಂದನೆ ಮಾಡಿದ್ದು, ಅಲ್ಲದೇ, ಜಮ್ಮು-ಕಾಶ್ಮೀರದ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ.
ಇಮ್ರಾನ್ ಅವರು ಭಾಷಣ ಆರಂಭ ಮಾಡುತ್ತಿದ್ದಂತೆಯೇ, ವಿಶ್ವಸಂಸ್ಥೆಉ ಭಾರತದ ಪರ್ಮನೆಂಟ್ ಮಿಷನ್ನ ಕಾರ್ಯದರ್ಶಿ ಮಿಜಿತೋ ವಿನಿತೋ ಅವರು ಸಭೆಯಿಂದ ಎದ್ದು ಹೊರ ನಡೆದಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಈ ಬಗ್ಗೆ ವಿಶ್ವಸಂಸ್ಥೆಯ ಖಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಅವರು ಟ್ವೀಟ್ ಮಾಡಿದ್ದು, ಇಮ್ರಾನ್ ಖಾನ್ ಅವರ ಹೇಳಿಕೆ ಅಸ್ಪಷ್ಟವಾಗಿದೆ ಎಂದಿದ್ದಾರೆ.
ಇಮ್ರಾನ್ ಖಾನ್ ಅವರ ಹೇಳಿಕೆಯು ಕೀಳುಮಟ್ಟದ್ದು, ಪಾಕಿಸ್ತಾನದ ಅಲ್ಪಸಂಖ್ಯಾತರ ಮೇಲೆ ಹಾಗೂ ಗಡಿಯಾಚೆಗಿನ ಭಯೋತ್ಪಾನೆಯ ವಿಚಾರವನ್ನು ಮುಚ್ಚಿಡಲಾಗುತ್ತಿದೆ. ಈ ವಿಚಾರವಾಗಿ ತಕ್ಕ ಪ್ರತ್ಯುತ್ತರ ನೀಡುವ ಹಕ್ಕನ್ನು ಭಾರತ ಹೊಂದಿದೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಹೇಳಿಕೆಯು ಕೀಳುಮಟ್ಟದ್ದಾಗಿದ್ದು ಕೆಟ್ಟ ಸುಳ್ಳುಗಳು, ವೈಯಕ್ತಿಕ ನಿಂದನೆ, ಆಕ್ರಮಣಶೀಲತೆಯಿಂದ ಕೂಡಿವೆ. ಪಾಕಿಸ್ತಾನದ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಗಡಿಯಾಚೆಗಿನ ಭಯೋತ್ಪಾದನೆ ವಿಷಯವನ್ನು ಮುಚ್ಚಿಡಲಾಗಿದೆ. ಇದಕ್ಕೆ ತಕ್ಕ ತಿರುಗೇಟು ನೀಡುವ ಹಕ್ಕು ಭಾರತಕ್ಕಿದೆ’ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಟ್ವೀಟ್ ಮಾಡಿದ್ದಾರೆ.