ವಾಷಿಂಗ್ಟನ್,ಅ. 06 (DaijiworldNews/HR): ಕ್ಯಾಲಿಫೋರ್ನಿಯಾದಲ್ಲಿರುವ ಭಾರತ ಮೂಲಕ ಅಮೇರಿಕಾ ಮಹಿಳೆಯು ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿರುವ ಆರೋಪದ ಹಿನ್ನೆಲೆಯಲ್ಲಿ ಮಹಿಳೆಗೆ ನ್ಯಾಯಾಲಯ 15 ವರ್ಷ ಸೆರೆವಾಸ ಶಿಕ್ಷೆ ವಿಧಿಸಿದೆ ಎಂದು ತಿಳಿದು ಬಂದಿದೆ.
ಕಾರ್ಮಿಕರನ್ನು ಕಡಿಮೆ ವೇತನಕ್ಕೆ, ಹೆಚ್ಚು ಸಮಯ ದುಡಿಸಿಕೊಳ್ಳುತ್ತಿದ್ದಾರೆಂಬ ಆರೋಪ ಹೊತ್ತಿರುವವರು ಶರ್ಮಿಷ್ಠ ಬರೈ ಮತ್ತು ಪತಿ ಸತೀಶ್ ಕರ್ತನ್ ದಂಪತಿ.
ಇನ್ನು ಈ ವಿಚಾರಣೆಯು ಕಳೆದ ವರ್ಷ ಮಾರ್ಚ್ನಲ್ಲಿ ವಿಚಾರಣೆಯಲ್ಲಿ ಫೆಡರಲ್ ನ್ಯಾಯಾಲಯ, ಈ ದಂಪತಿಯನ್ನು ಕಾರ್ಮಿಕರನ್ನು ಬಲವಂತವಾಗಿ ದುಡಿಸಿಕೊಳ್ಳುವ ಸಂಚು ರೂಪಿಸಿರುವ ವಿಚಾರದಲ್ಲಿ ತಪ್ಪಿತಸ್ಥರೆಂದು ತೀರ್ಮಾನಿಸಿತು. ಈಗ ಶರ್ಮಿಷ್ಠ ಅವರಿಗೆ ಸೆರೆವಾಸದ ಶಿಕ್ಷೆ ವಿಧಿಸಿದ್ದು, ಪತಿ ಸತೀಶ್ ಕರ್ತನ್ ಅವರಿಗೆ ಅಕ್ಟೋಬರ್ 22ರಂದು ನ್ಯಾಯಾಲಯ ಶಿಕ್ಷೆ ಪ್ರಕಟಿಸಲಿದೆ.
ಆರೋಪಿ ಶರ್ಮಿಷ್ಠ, ಸತೀಶ್ ದಂಪತಿಗಳು ಕಾರ್ಮಿಕರಿಗೆ ಕನಿಷ್ಠ ವೇತನ ನೀಡಿ, ನಿತ್ಯ 18 ಗಂಟಗಳವರೆಗೆ ದುಡಿಸಿಕೊಳ್ಳುತ್ತಿದ್ದು, ಜೊತೆಗೆ ಬೆದರಿಕೆ, ಹಿಂಸಾಚಾರ ಮಾಡುತ್ತಿದ್ದರು. ಇದರಿಂದ ಸಂತ್ರಸ್ತ ಕಾರ್ಮಿಕರ ವೈಯಕ್ತಿಕ ಹಕ್ಕುಗಳು ಉಲ್ಲಂಘನೆಯಾಗಿದೆ ಎಂದು ಎರಿಕ್ ಹೇಳಿದ್ದಾರೆ.