ವಾಷಿಂಗ್ಟನ್, ಅ. 13 (DaijiworldNews/PY): ಅಮೆರಿಕ ಮೂಲದ ಜಾನ್ಸನ್ ಹಾಗೂ ಜಾನ್ಸನ್ ಕಂಪೆನಿ ತನ್ನ ಕೊರೊನಾ ಲಸಿಕೆಯ ಪ್ರಯೋಗವನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ.
ಈ ಕಂಪೆನಿ ತಯಾರಿಸಿರುವ ಲಸಿಕೆಯ ಮೂರನೇ ಹಾಗೂ ಅಂತಿಮ ಹಂತದಲ್ಲಿ ಸುಮಾರು 60 ಸಾವಿರ ಜನರ ಮೇಲೆ ಕ್ಲಿನಿಕಲ್ ಪರೀಕ್ಷೆ ಮಾಡಲಾಗುತ್ತಿತ್ತು. ಆದರೆ, ಪರೀಕ್ಷೆಗೆ ಒಳಪಟ್ಟವರಿಗೆ ವಿವರಿಸಲಾಗದಂತ ಕಾಯಿಲೆಗಳು ಕಾಣಿಸಿಕೊಂಎ ಕಾರಣ ಕ್ಲಿನಿಕಲ್ ಪ್ರಯೋಗವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವದಾಗಿ ಕಂಪೆನಿ ತಿಳಿಸಿದೆ.
ಜಾನ್ಸನ್ ಕಂಪೆನಿಯು ಸಿಂಗಲ್ ಶಾಟ್ ವ್ಯಾಕ್ಸಿನ್ ಎನ್ನುವ ಲಸಿಕೆಯನ್ನು ಅಭಿವೃದ್ದಿಪಡಿಸಿತ್ತು. ಈ ಲಸಿಕೆಯ ಪ್ರಯೋಗಕ್ಕೆ ಒಳಗಾದವರಿಗೆ ವಿವರಿಸಲಾಗದ ಕಾಯಿಲೆ ಕಾಣಿಸಿಕೊಂಡ ಹಿನ್ನೆಲೆ ಪರೀಕ್ಷೆಯನ್ನು ನಿಲ್ಲಿಸಲಾಗಿದೆ.