ವಾಷಿಂಗ್ಟನ್, ಅ. 15 (DaijiworldNews/PY): ಅಮೇರಿಕಾದ ಅಧ್ಯಕ್ಷೀಯ ಆಡಳಿತದ ಇತಿಹಾಸದಲ್ಲಿ ಡೊನಾಲ್ಡ್ ಟ್ರಂಪ್ ಅವರ ಆಡಳಿತ ಅತ್ಯಂತ ವೈಫಲ್ಯ ಕಂಡಿರುವ ಆಡಳಿತ ಎಂದು ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮತನಾಡಿದ ಅವರು, ಅಮೇರಿಕಾ ಅಧ್ಯಕ್ಷ ಕೊರೊನಾ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆಂದು ಖಂಡಿಸಿದ್ದಾರೆ.
ಟ್ರಂಪ್ ಅವರ ವೈಫಲ್ಪದಿಂದಾಗಿ ಲಕ್ಷಾಂತರ ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಈ ಸಂದರ್ಭದಲ್ಲಿ ವಿಜ್ಞಾನವನ್ನು ಒಪ್ಪಿಕೊಳ್ಳುವ, ಸತ್ಯ ಹಾಗೂ ಸತ್ಯವನ್ನು ಮಾತನಾಡುವ ಯೋಜನೆಗಳನ್ನು ಹೊಂದಿರುವಂತ ನೂತನ ಅಧ್ಯಕ್ಷರು ಅಮೇರಿಕಾಕ್ಕೆ ಬೇಕಾಗಿದ್ದಾರೆ ಎಂದಿದ್ದಾರೆ.
ಅಧ್ಯಕ್ಷೀಯ ಅಭ್ಯರ್ಥಿ ಜೊ ಬೈಡೆನ್ ಅವರು, ರೋಗವನ್ನು ನಿಯಂತ್ರಿಸುವ ಲಸಿಕೆಯನ್ನು ಉಚಿತವಾಗಿ ನೀಡುವ ರಾಷ್ಟ್ರೀಯ ಯೋಜನೆಯನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ಕೊರೊನಾ ಪ್ರಾರಂಭವಾದ ದಿನದಿಂದ ಅಮೇರಿಕಾ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ತೆಗೆದುಕೊಂಡಿರುವ ಕ್ರಮಗಳನ್ನು ನೋಡಿದರೆ, ಏನೆಲ್ಲಾ ವೈಫಲ್ಯಗಳು ಆಗಿವೆ ಎನ್ನುವದನ್ನು ತಿಳಿಯಬಹುದು ಎಂದಿದ್ದಾರೆ.