ವಾಷಿಂಗ್ಟನ್, ಅ. 16 (DaijiworldNews/PY): ಪ್ರತಿನಿತ್ಯ ಮಾಸ್ಕ್ ಧರಿಸುವವರಿಗೆ ಕೊರೊನಾ ಸೋಂಕು ತಗಲುತ್ತದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಗುರುವಾರ ಮಿಯಾಮಿಯಲ್ಲಿ ನಡೆದ ಎನ್ಬಿಸಿ ನ್ಯೂಸ್ ಟೌನ್ ಹಾಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂದರ್ಭ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಯಾವಾಗಲೂ ಮಾಸ್ಕ್ ಧರಸುವವರಿಗೆ ಕೊರೊನಾ ಸೋಂಕು ತಗುಲುತ್ತದೆ ಎಂದಿದ್ದಾರೆ.
ಶ್ವೇತಭವನದಲ್ಲಿ ಸೆ.26ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅನೇಕ ಮಂದಿ ಮಾಸ್ಕ್ ಧರಿಸಿರಲಿಲ್ಲ. ಈ ಕಾರಣದಿಂದ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಮೆಲಾನಿಯಾ ಟ್ರಂಪ್ ಅವರಿಗೆ ಕೊರೊನಾ ಸೋಂಕು ತಗುಲಿರಬಹುದೇ ಎಂದು ಜನರು ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದರು.
ಗುರುವಾರ ಟ್ರಂಪ್ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಈ ವಿಚಾರವಾಗಿ ಪ್ರಶ್ನೆ ಕೇಳಿದ್ದ ಸಂದರ್ಭ ಯಾವಾಗಲೂ ಮಾಸ್ಕ್ ಧರಿಸಿರುವವರಿಗೆ ಬೇಗನೇ ಕೊರೊನಾ ಸೋಂಕು ತಗಲುತ್ತದೆ ಎಂದು ಹೇಳಿದ್ದಾರೆ.
ಸೋಂಕು ನಿಯಂತ್ರಿಸಲು ಮಾಸ್ಕ್ ಧರಿಸುವುದು ಉತ್ತಮ. ಕೊರೊನಾ ಲಸಿಕೆ ಇನ್ನು ಅಭಿವೃದ್ದಿಯಲ್ಲಿರುವ ಕಾರಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೋಗ ನಿಯಂತ್ರಣ ಮತ್ತು ತಡೆ ಕೇಂದ್ರದ ನಿರ್ದೇಶಕರು ತಿಳಿಸಿದ್ದಾರೆ.