ವಾಷಿಂಗ್ಟನ್, ಅ. 19 (DaijiworldNews/PY): ನಾನೇನಾದರೂ ಈ ಚುನಾವಣೆಯಲ್ಲಿ ಸೋತರೆ ನಾನು ಈ ದೇಶ ಬಿಟ್ಟು ಹೋಗಬೇಕಾಗುತ್ತದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಫ್ಲೋರಿಡಾ ಹಾಗೂ ಜಾರ್ಜಿಯಾದಲ್ಲಿ ಚುನಾವಣಾ ಪ್ರಚಾರ ರ್ಯಾಲಿಯ ಸಂದರ್ಭ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಡೆಮಾಕ್ರಾಟ್ ಅಭ್ಯರ್ಥಿ ಜೋ ಬಿಡೆನ್ ಅವರು ಜಯಶಾಲಿಯಾದರೆ ದೇಶದಲ್ಲಿ ಕಮ್ಯುನಿಸಂ ಹಾಗೂ ಕ್ರಿಮಿನಲ್ ವಲಸೆಯ ಪ್ರವಾಹ ಸೃಷ್ಠಿಯಾಗಲಿದೆ. ಆದರೆ, ಈ ಚುನಾವಣೆಯಲ್ಲಿ ನಾನೇನಾದರು ಸೋತರೆ ಏನಾಗುತ್ತದೆ ಎಂದು ಊಹಿಸಿದ್ದೀರಾ? ನಾನು ಈ ಚುನಾವಣೆಯಲ್ಲಿ ಸೋತರೆ ಈ ದೇಶವನ್ನೇ ಬಿಟ್ಟು ಹೋಗಬೇಕಾಗುತ್ತದೆ ಎಂದಿದ್ದಾರೆ.
ಇನ್ನಂದೆಡೆ ಮಿಚಿಗನ್ನಲ್ಲಿ ಮಾತನಾಡಿದ ಜೋ ಬಿಡೆನ್ ಅವರು, ಭೀತಿಯ ವಿರುದ್ದ ಭರವಸೆ, ವಿಭಜನೆಯ ವಿರುದ್ದವಾಗಿ ಏಕತೆ, ಸುಳ್ಳಿನ ವಿರುದ್ದ ಸತ್ಯವನ್ನು ಆರಿಸಿಕೊಳ್ಳುವವರು. ನಿಮಗೆಲ್ಲರಿಗೂ ಡೊನಾಲ್ಡ್ ಟ್ರಂಪ್ ಯಾರೆಂದು ತಿಳಿದಿದೆ. ಆದರೆ, ಇದೀಗ ನೀವು ಯಾರೆಂಬುದನ್ನು ತೋರಿಸುವ ಸಮಯ ಸಮೀಪಿಸಿದೆ ಎಂದು ಹೇಳಿದ್ದಾರೆ.