ಮನಿಲಾ, ಅ. 26 (DaijiworldNews/HR): ಫಿಲಿಪ್ಪೀನ್ಸ್ನ ದಕ್ಷಿಣ ಮನಿಲಾ ಪ್ರಾಂತ್ಯದಲ್ಲಿ ಇಂದು ಮೊಲಾವೆ ಚಂಡಮಾರುತ ಅಪ್ಪಳಿಸಿದ್ದು, ಅನೇಕ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಮೊಲಾವೆ ಚಂಡಮಾರುತದಿಂದಾಗಿ ಅನೇಕ ಮನೆಗಳು ಹಾನಿಯಾಗಿದ್ದು, ಈವರೆಗೂ ಯಾವುದೇ ಪ್ರಾಣ ಹಾನಿಯಾದ ವರದಿಯಾಗಿಲ್ಲ.
ಬಟಂಗಾಸ್ ಪ್ರಾಂತ್ಯದಲ್ಲಿ ನೌಕೆಯೊಂದು ಮುಳುಗಡೆಯಾಗಿದ್ದು, ಇದರಲ್ಲಿ ಪ್ರಯಾಣಿಸುತ್ತಿದ್ದ ಏಳು ಮಂದಿಯನ್ನು ರಕ್ಷಿಸಲಾಗಿದ್ದು, ಒಬ್ಬ ವ್ಯಕ್ತಿ ನಾಪತ್ತೆಯಾಗಿದ್ದಾರೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಈ ಚಂಡಮಾರುತವು ಗಂಟೆಗೆ ಸುಮಾರು 125 ಕಿ.ಮೀ. ವೇಗದಲ್ಲಿ ಬೀಸಿದೆ ಎಂದು ಸರ್ಕಾರಿ ಹವಾಮಾನ ಇಲಾಖೆ ತಿಳಿಸಿದೆ.