ನ್ಯೂಯಾರ್ಕ್, ಅ.28 (DaijiworldNews/PY): ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ಮಹತ್ವದ ದತ್ತಾಂಶದ ಬಿಡುಗಡೆಯು ಅಮೇರಿಕಾ ಅಧ್ಯಕ್ಷೀಯ ಚುನಾವಣೆಯ ಮುನ್ನ ಸಾಧ್ಯವಾಗದು. ಆದರೆ, 2020ರಲ್ಲೇ ಕೊರೊನಾ ಲಸಿಕೆ ಪೂರೈಸುವ ಸಾಧ್ಯತೆ ಇದೆ ಎಂದು ಫೈಜರ್ ಕಂಪೆನಿ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಫೈಜರ್ ಫಾರ್ಮಾ ಕಂಪೆನಿಯ ಸಿಇಒ ಆಲ್ಬರ್ಟ್ ಬೌರ್ಲಾ ಅವರು, ಯೋಜನೆಯ ಅನ್ವಯ ಕ್ಲಿನಿಕಲ್ ಪ್ರಯೋಗ ಮುಂದುವರೆದು ಔಷಧ ಸಂಸ್ಥೆಯಿಂದ ಅನುಮತಿ ದೊರೆತಲ್ಲಿ ಅಮೇರಿಕಾದಲ್ಲಿ ಈ ವರ್ಷವೇ ಕೋಟಿ ಡೋಸ್ಗಳಷ್ಟು ಕೊರೊನಾ ಲಸಿಕೆ ಪೂರೈಕೆ ಮಾಡುವುದಾಗಿ ತಿಳಿಸಿದ್ದಾರೆ
ಇದೀಗ ನಾವು ಕೊನೆಯ ಹಂತವನ್ನು ತಲುಪಿದ್ದೇವೆ. ಎಲ್ಲರೂ ಕೂಡಾ ಜಾಗತಿಕ ಆರ್ಥಿಕತೆಯ ಹಿತದೃಷ್ಟಿಯಿಂದ ತಾಳ್ಮೆ ವಹಿಸಬೇಕು. ಇನ್ನೂ ಕೂಡಾ ಲಸಿಕೆಯ ಸಾಮರ್ಥ್ಯವನ್ನು ಪೂರ್ಣವಾಗಿ ಅರಿಯಲು ಸಾಧ್ಯವಾಗಿಲ್ಲ ಎಂದಿದ್ದಾರೆ.
ಅಮೇರಿಕಾ ಸರ್ಕಾರವು ಫೈಜರ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, 2020ರ ಅಂತ್ಯದೊಳಗಾಗಿ ಸುಮಾರು ನಾಲ್ಕು ಕೋಟಿ ಡೋಸ್ಗಳನ್ನು ಹಾಗೂ 2021ರ ಮಾರ್ಚ್ಗೆ ಸುಮಾರು 10 ಕೋಟಿ ಡೋಸ್ಗಳನ್ನು ಪೂರೈಕೆ ಮಾಡುವಂತೆ ತಿಳಿಸಿತ್ತು.