ವಾಷಿಂಗ್ಟನ್,ಅ. 31 (DaijiworldNews/HR): ಅಮೇರಿಕಾದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಚಾರ ಭರದಿಂದ ಸಾಗುತ್ತಿದ್ದು, ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೈಗೊಂಡಿದ್ದ 18 ರ್ಯಾಲಿಗಳಿಂದ ಇಟ್ಟು 30,000 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 700 ಮಂದಿ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.
ಸ್ಯಾನ್ಫೋರ್ಡ್ ಯೂನಿವರ್ಸಿಟಿ ನಡೆಸಿದ ಹೊಸ ಅಧ್ಯಯನವೊಂದರಲ್ಲಿ ಈ ಆತಂಕಕಾರಿ ಸಂಗತಿಯನ್ನು ತಿಳಿಸಲಾಗಿದ್ದು, ಟ್ರಂಪ್ ಆಯೋಜಿಸಿದ್ದ ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸಿದ್ದ ಸಮುದಾಯಗಳು ಕೊರೊನಾ ಸೋಂಕು ಮತ್ತು ಸಾವಿನ ವಿಚಾರದಲ್ಲಿ ಭಾರೀ ಬೆಲೆ ತೆತ್ತುವಂತಾಗಿದೆ ಎಂದು ಹೇಳಿದೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಟ್ರಂಪ್ , ಅಧ್ಯಕ್ಷೀಯ ಪ್ರತಿಸ್ಪರ್ಧಿ, ಮಾಜಿ ಉಪಾಧ್ಯಕ್ಷ ಮತ್ತು ಡೆಮೊಕ್ರೆಟಿಕ್ ಪಕ್ಷದ ನಾಯಕ ಜೋ ಬಿಡೆನ್, ಅಮೆರಿಕ ಅಧ್ಯಕ್ಷರಿಗೆ ಚುನಾವಣೆ ಮುಖ್ಯವಾಗಿದೆ ಹೊರತು ಜನರ ಹಿತಾಸಕ್ತಿ ಅಲ್ಲ. ಅಮೆರಿಕನ್ನರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಅವರ ಬೆಂಬಲಿಗರನ್ನೂ ಕೂಡ ಕಡೆಗಣಿಸಿದ್ದಾರೆ ಎಂಬುದಾಗಿ ಟೀಕಿಸಿದ್ದಾರೆ.
ಸಮೀಕ್ಷೆಯ ವರದಿ ಬಗ್ಗೆ ಸಾಮಾಜಿಕ ಜಾಲತಾಣ ಟ್ವೀಟ್ ಮಾಡಿರುವ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜೋ ಬಿಡನ್, ಟ್ರಂಪ್ ಅವರಿಗೆ ಅಮೇರಿಕನ್ನರ ಬಗ್ಗೆ ಕಾಳಜಿ ಇಲ್ಲ. ತಮ್ಮ ಬೆಂಬಲಿಗರ ಬಗ್ಗೆಯೂ ಕಾಳಜಿಯಿರಲಿಲ್ಲ ಎಂದು ಹೇಳಿದ್ದಾರೆ.