ನವದೆಹಲಿ,02 (DaijiworldNews/HR): ಭಾರತ ಮೂಲದ ಪ್ರಿಯಾಂಕಾ ರಾಧಾಕೃಷ್ಣನ್ ಅವರು ನ್ಯೂಜಿಲೆಂಡ್ ಸರ್ಕಾರದ ಕ್ಯಾಬಿನೆಟ್ ಗೆ ಸಚಿವೆಯಾಗಿ ಆಯ್ಕೆಯಾಗಿದ್ದು, ಆ ಮೂಲಕ ಭಾರತ ಮೂಲದ ಮೊಟ್ಟ ನ್ಯೂಜಿಲೆಂಡ್ ಗೆ ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪ್ರಿಯಾಂಕಾ ರಾಧಾಕೃಷ್ಣನ್ ಅವರು ಎರ್ನಾಕುಲಂ ಮೂಲದರಾಗಿದ್ದು, ಜಸಿಂಡಾ ಅರ್ಡೆರ್ನ್ ಸಚಿವ ಸಂಪುಟಕ್ಕೆ ಎರಡನೇ ಬಾರಿಗೆ ಸಂಸದರಾಗಿ, ಇದೀಗ ಸಚಿವರಾಗಿ ಆಯ್ಕೆಯಾಗಿದ್ದಾರೆ.
ಇನ್ನು ಪ್ರಿಯಾಂಕಾ ಅವರು ಭಾರತದಲ್ಲಿ ಹುಟ್ಟಿ ಬಳಿಕ ಸಿಂಗಪುರದಲ್ಲಿ ಬೆಳೆದಿದ್ದರು. ನಂತರ ನ್ಯೂಜಿಲೆಂಡ್ಗೆ ತೆರಳಿ ವೆಲ್ಲಿಂಗ್ಟನ್ನ ವಿಕ್ಟೋರಿಯಾ ವಿಶ್ವವಿದ್ಯಾಲಯದಿಂದ ಅಭಿವೃದ್ಧಿ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಪ್ರಿಯಾಂಕಾ ಅವರು ಜನಾಂಗೀಯ ಸಮುದಾಯಗಳ ಮಾಜಿ ಸಚಿವರಾಗಿದ್ದ ಜೆನ್ನಿ ಸೇಲ್ಸಾ ಅವರ ಖಾಸಗಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.