ವಾಷಿಂಗ್ಟನ್ ಡಿಸಿ, ನ.08 (DaijiworldNews/PY): "ಇನ್ನು ಅಮೇರಿಕಾ ದೇಶವನ್ನು ಒಗ್ಗೂಡಿಸುವ ಅಧ್ಯಕ್ಷರಿರುತ್ತಾರೆ. ಬದಲಾಗಿ ದೇಶವನ್ನು ವಿಭಜಿಸುವ ಅಧ್ಯಕ್ಷರು ಇರುವುದಿಲ್ಲ" ಎಂದು ಅಮೇರಿಕಾದ ನೂತನ ನಿಯೋಜಿತ ಅಧ್ಯಕ್ಷ ಜೊ ಬಿಡೆನ್ ಹೇಳಿದ್ದಾರೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ದೇಶದ ಜನತೆಯನ್ನುದ್ದೇಶಿಸಿ ಮೊದಲ ಭಾಷಣದಲ್ಲಿ ಮಾತನಾಡಿದ ಅವರು, "ಅಧ್ಯಕ್ಷನಾಗಿ ನಾನು ಪ್ರಮಾಣ ಮಾಡುತ್ತೇನೆ. ಒಗ್ಗಟ್ಟು ಹಾಗೂ ಒಕ್ಕೂಟದ ವ್ಯವಸ್ಥೆಯಾಗಬೇಕು" ಎಂದಿದ್ದಾರೆ.
"ನನ್ನ ಗೆಲುವಿಗೆ ದೇಶದ ಜನರು ಕಾರಣ. ಅವರಿಂದಲೇ ನಮಗೆ ಪರಿಪೂರ್ಣವಾದ ಗೆಲುವು ದೊರೆತಿದೆ. ಹಿಂದಿನ ಎಲ್ಲಾ ಚುನಾವಣೆಗೆ ಹೋಲಿಕೆ ಮಾಡಿದರೆ ನಾವು ಅಧಿಕ ಮತ ಗಳಿಸಿದ್ಧೇವೆ" ಎಂದು ತಿಳಿಸಿದ್ದಾರೆ.
"ಅಮೇರಿಕಾದ ಅಧ್ಯಕ್ಷನಾಗಿ ನಾನು ಈ ದೇಶದ ಆತ್ಮಕ್ಕೆ ಮರುಜೀವ ತುಂಬಲು ಹಾಗೂ ಮಧ್ಯಮ ವರ್ಗದವರಿಗೆ ಪುಷ್ಠಿ ನೀಡಲು ಶ್ರಮಿಸುತ್ತೇನೆ" ಎಂದು ಹೇಳಿದ್ದಾರೆ.