ಕಠ್ಮಂಡು, ಡಿ.20 (DaijiworldNews/MB) : ರವಿವಾರ ನೇಪಾಳದ ಕ್ಯಾಬಿನೆಟ್ ತುರ್ತು ಸಭೆ ನಡೆಸಿದ್ದು ಸಂಸತ್ ವಿಸರ್ಜಿಸಲು ಕ್ಯಾಬಿನೆಟ್ ಶಿಫಾರಸು ಮಾಡಿದೆ ಎಂದು ವರದಿಯಾಗಿದೆ.
ನೇಪಾಳ ಪ್ರಧಾನಿ ಕೆ. ಪಿ. ಶರ್ಮಾ ಒಲಿ
ಈ ಬಗ್ಗೆ ಮಾಹಿತಿ ನೀಡಿರುವ ನೇಪಾಳ ಸರ್ಕಾರದ ಇಂಧನ ಸಚಿವರಾಗಿರುವ ಬರ್ಸಮನ್ ಪುನ್, ಸಂಸತ್ತನ್ನು ವಿಸರ್ಜಿಸಲು ಶಿಫಾರಸು ಮಾಡಲು ಇಂದಿನ ತುರ್ತು ಕ್ಯಾಬಿನೆಟ್ ಸಭೆಯಲ್ಲಿ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಕೇವಲ ಮೂರು ಸದಸ್ಯರ ಹಾಜರಾತಿಯಲ್ಲಿ ಸಭೆಗಳನ್ನು ಕರೆಯುವ ಹಾಗೂ ನಿರ್ಣಯಗಳನ್ನು ತೆಗೆದುಕೊಳ್ಳುವ ಹಕ್ಕನ್ನು ನೀಡುವ ಸಾಂವಿಧಾನಿಕ ಮಂಡಳಿ ಕಾಯ್ದೆಯೊಂದನ್ನು ಪ್ರಧಾನಿ ಶರ್ಮಾ ಮಂಗಳವಾರ ಸುಗ್ರೀವಾಜ್ಞೆ ಹೊರಡಿಸಿದ್ದು ಈ ಸುಗ್ರೀವಾಜ್ಞೆ ಹಿಂಪಡೆಯುವಂತೆ ಒತ್ತಡ ಹೇರಳಾಗಿತ್ತು. ವಿವಾದಾತ್ಮಕ ಆರ್ಡಿನೆನ್ಸ್ ವಾಪಾಸ್ ಪಡೆದು ಕೊಳ್ಳುವಂತೆ ಆಡಳಿತರೂಢ ನೇಪಾಳ ಕಮ್ಯೂನಿಸ್ಟ್ ಪಕ್ಷದಲ್ಲಿ (ಎನ್ಸಿಪಿ) ಒತ್ತಡ ಉಂಟಾದ ಕಾರಣ ಸಂಸತ್ತನ್ನು ವಿಸರ್ಜಿಸಲು ಪ್ರಧಾನಿ ಕೆ.ಪಿ. ಶರ್ಮಾ ಒಲಿ ಶಿಫಾರಸು ಮಾಡಿದ್ದಾರೆ.