ವಾಷಿಂಗ್ಟನ್, ಡಿ.21 (DaijiworldNews/PY): ಅಮೇರಿಕಾದ ನಿಯೋಜಿತ ಅಧ್ಯಕ್ಷ ಜೊ ಬಿಡೆನ್ ಅವರು ಕೊರೊನಾ ಲಸಿಕೆಯ ಮೊದಲ ಡೋಸ್ ಅನ್ನು ಟಿವಿ ನೇರಪ್ರಸಾರದ ಕಾರ್ಯಕ್ರಮದಲ್ಲಿ ಸೋಮವಾರ ಸ್ವೀಕರಿಸಲಿದ್ದಾರೆ.
ಸದ್ಯದಲ್ಲಿಯೇ ಅಮೇರಿಕಾಕ್ಕೆ ಮೊಡರ್ನಾ ಸಂಸ್ಥೆ ತಯಾರಿಸಿದ ಕೊರೊನಾ ಲಸಿಕೆ ಕೂಡಾ ತಲುಪಲಿದೆ.
"ನನಗೆ ಆರೋಗ್ಯ ಕಾರ್ಯಕರ್ತರಿಗಿಂತ ಮುನ್ನ ಕೊರೊನಾ ಲಸಿಕೆ ಸ್ವೀಕರಿಸಲು ಇಷ್ಟವಿಲ್ಲ. ಆದರೆ, ಅಮೇರಿಕಾದ ಜನತೆ ಕೊರೊನಾ ಲಸಿಕೆ ಸುರಕ್ಷಿತವಾಗಿದೆ ಎನ್ನುವ ನಿಟ್ಟಿನಲ್ಲಿ ತೋರಿಸಲು ಸಾರ್ವಜನಿಕವಾಗಿ ಲಸಿಕೆ ಸ್ವೀಕರಿಸುವುದು ಅವಶ್ಯಕವಾಗಿದೆ" ಎಂದು ಈ ಹಿಂದೆ ಜೊ ಬಿಡೆನ್ ಅವರು ಹೇಳಿದ್ದರು.
ಲಸಿಕೆ ಸ್ವೀಕರಿಸಿದ ನಂತರ ಜೊ ಬಿಡೆನ್ ಹಾಗೂ ಅವರ ಪತ್ನಿ ಜಿಲ್ ಅವರು ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಲಿದ್ದಾರೆ.
ಕಮಲಾ ಹ್ಯಾರಿಸ್ ಹಾಗೂ ಅವರ ಪತಿ ಕೂಡಾ ಮುಂದಿನ ವಾರ ಕೊರೊನಾ ಲಸಿಕೆಯನ್ನು ಸ್ವೀಕರಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.