ಕರಾಚಿ, ಮಾ. 20(DaijiworldNews/HR): ಸಿಂಧ್ ಪ್ರಾಂತ್ಯದ ಕ್ಷೌರಿಕನ ಅಂಗಡಿಯಲ್ಲಿ ಕ್ಷೌರ ಮಾಡಿಸುತ್ತಿದ್ದಾಗ ಪಾಕಿಸ್ತಾನದ 31 ವರ್ಷದ ಹಿಂದೂ ಪತ್ರಕರ್ತನನ್ನು ಕೆಲವು ಅಪರಿಚಿತ ಹಲ್ಲೆಕೋರರು ಗುಂಡಿಕ್ಕಿ ಕೊಂದ ಘಟನ್ ನಡೆದಿದೆ.
ಸುಕ್ಕೂರ್ ನಗರದ ಕ್ಷೌರಿಕನ ಅಂಗಡಿಯಲ್ಲಿ ಕುಳಿತಿದ್ದಾಗ ಎರಡು ಬೈಕ್ಗಳಲ್ಲಿ ಬಂದಿದ್ದ ಹಲ್ಲೆಕೋರರು ಗುಂಡು ಹಾರಿಸಿದದ್ದಾರೆ ಎನ್ನಲಾಗಿದೆ.
ಪತ್ರಕರ್ತನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.
ಕುಟುಂಬಕ್ಕೆ ಯಾವುದೇ ದ್ವೇಷವಿಲ್ಲ ಎಂದು ಅವರ ತಂದೆ ದಿಲೀಪ್ ಕುಮಾರ್ ಹೇಳಿದ್ದು, ಕೊಲೆಯ ಬಗ್ಗೆ ವೈಯಕ್ತಿಕ ದ್ವೇಷದ ಕಾರಣ ಎಂದು ಪೊಲೀಸರು ಹೇಳಿದ್ದನ್ನು ತಳ್ಳಿಹಾಕಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮೂವರು ಅಪರಿಚಿತ ಹಲ್ಲೆಕೋರರ ವಿರುದ್ಧ ಪೊಲೀಸರು ಶುಕ್ರವಾರ ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಹತ್ಯೆಯನ್ನು ಖಂಡಿಸಿ, ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯ (ಎಂಎನ್ಎ) ಹಿಂದೂ ಸದಸ್ಯ ಲಾಲ್ ಚಾಂದ್ ಮಾಲ್ಹಿ ಇದು "ಬಹಳ ಕಾಳಜಿಯ ವಿಷಯ" ಎಂದು ಹೇಳಿದರು
ಲಾಲ್ವಾನಿಯ ಹತ್ಯೆಯನ್ನು ವಿರೋಧಿಸಿ ಪತ್ರಕರ್ತರ ಗುಂಪು ಪ್ರತಿಭಟಿಸುತ್ತಿದ್ದು, ಅಂತ್ಯಕ್ರಿಯೆಯ ನಂತರ ಸ್ಥಳೀಯ ವ್ಯಾಪಾರಿಗಳು ಹತ್ಯೆಯ ವಿರುದ್ಧ ಅಂಗಡಿಗಳನ್ನು ಮುಚ್ಚಿ ಮೆರವಣಿಗೆ ನಡೆಸಿದ್ದಾರೆ.
ಏತನ್ಮಧ್ಯೆ, ಅಮೆರಿಕ ಮೂಲದ ಸ್ವತಂತ್ರ ಲಾಭೋದ್ದೇಶವಿಲ್ಲದ ಸಂಘಟನೆಯಾದ ನ್ಯೂಯಾರ್ಕ್ ಮೂಲದ ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್ (ಸಿಪಿಜೆ) ಸಿಂಧ್ ಪ್ರಾಂತ್ಯದ ಅಧಿಕಾರಿಗಳನ್ನು "ತಕ್ಷಣವೇ ವಿಶ್ವಾಸಾರ್ಹ ತನಿಖೆಯನ್ನು ಪ್ರಾರಂಭಿಸಬೇಕು" ಮತ್ತು ಹತ್ಯೆಗೆ ಕಾರಣರಾದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.