ಡೊಮಿನಿಕಾ, ಜು.02 (DaijiworldNews/HR): ಬಹುಕೋಟಿ ಹಗರಣದ ಆರೋಪಿ ಮೆಹುಲ್ ಚೋಕ್ಸಿಯನ್ನು ಆಂಟಿಗುವಾದಿಂದ ಬಾರ್ಬುಡಾಗೆ ಅಪಹರಿಸುವಲ್ಲಿ ಡೊಮಿನಿಕಾ ಸರ್ಕಾರದ ಕೈವಾಡವಿದೆ ಎಂಬ ಆರೋಪವನ್ನು ಡೊಮಿನಿಕಾ ಪ್ರಧಾನಿ ರೂಸ್ವೆಲ್ಟ್ ಸ್ಕೆರ್ರಿಟ್ ಅಲ್ಲಗಳೆದಿದ್ದು, 'ಇದೊಂದು ಅಸಂಬಂದ್ಧ' ಆರೋಪ ಎಂದಿರುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೆಹುಲ್ ಚೋಕ್ಸಿಯ ಅವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ತನ್ನ ಕಾನೂನು ಪ್ರಕ್ರಿಯೆ ನಡೆಸಲು ನಮ್ಮ ಸರ್ಕಾರ ಅವಕಾಶ ಮಾಡಿಕೊಟ್ಟಿದ್ದು, ಈ ಸಂದರ್ಭದಲ್ಲಿ ಚೋಕ್ಸಿಯ ಹಕ್ಕುಗಳು ಮತ್ತು ಆಕ್ಷೇಪಗಳನ್ನೂ ಗೌರವಿಸಲಾಗುವುದು ಎಂಬುದಾಗಿ ಕಾರ್ಯಕ್ರಮಯೊಂದರಲ್ಲಿ ಸ್ಕೆರ್ರಿಟ್ ಅವರು ಭರವಸೆ ನೀಡಿದ್ದರು ಎಂದು ವರದಿಯಾಗಿದೆ.
ಇನ್ನು ಆಂಟಿಗುವಾದಿಂದ ಬಾರ್ಬುಡಾಕ್ಕೆ ಚೋಕ್ಸಿಯನ್ನು ಅಪಹರಿಸಲು ಭಾರತ ಮತ್ತು ಡೊಮಿನಿಕಾ ಸರ್ಕಾರಗಳು ಸಂಚು ರೂಪಿಸಿದ್ದವು ಎಂಬ ಆರೋಪಗಳನ್ನು ಕೂಡ ಪ್ರಧಾನಿ ರೂಸ್ವೆಲ್ಟ್ ಸ್ಕೆರ್ರಿಟ್ ಅಲ್ಲಗಳೆದಿದ್ದಾರೆ ಎಂದು ತಿಳಿದು ಬಂದಿದೆ.