ಇಸ್ಲಾಮಾಬಾದ್, ಫೆ 4(MSP): ಜಗತ್ತಿನಲ್ಲೇ ಅತಿ ಹೆಚ್ಚು ಕತ್ತೆಗಳನ್ನು ಹೊಂದಿರುವ 3ನೇ ದೇಶ ಎಂದು ಕರೆಸಿಕೊಂಡಿರುವ ಪಾಕಿಸ್ತಾನ ಈಗ ಕತ್ತೆಗಳನ್ನು ಚೀನಕ್ಕೆ ರಪ್ತು ಮಾಡಲು ಪ್ರಾರಂಭಿಸಿದೆ. ಹೌದು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನ ತನ್ನ ಸಂಕಷ್ಟದಿಂದ ಪಾರಾಗಲು ಕತ್ತೆಗಳ ಮೊರೆ ಹೋಗಿದೆ.
ಅಲ್ಲದೆ ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗಿದ್ದು, ವಿದೇಶಿ ವಿನಿಮಯಕ್ಕಾಗಿ ಅದರ ಕತ್ತೆಯನ್ನುಳಿದು ಏನು ಕೂಡ ಉಳಿದಿಲ್ಲ. ಹೀಗಾಗಿ ನೆರೆಯ ಚೀನಾಕ್ಕೆ ಪಾಕ್ ಕತ್ತೆಗಳನ್ನು ರಫ್ತು ಮಾಡಲಿದೆ. ತನ್ನ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆ ಮಾಡಲೆಂದು ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಈ ಒಪ್ಪಂದದ ಪ್ರಕಾರ ಪಾಕಿಸ್ತಾನ ಮೂರು ವರ್ಷಗಳಲ್ಲಿ ಚೀನಾಗೆ ಸುಮಾರು 80 ಸಾವಿರ ಕತ್ತೆಗಳನ್ನು ರಫ್ತು ಮಾಡಬೇಕಿದೆ. ಇದಕ್ಕಾಗಿ ಪಾಕ್ ಸರ್ಕಾರ ಖೈಬರ್ ಫಕ್ತುಂಕ್ವಾ ಪ್ರಾಂತ್ಯದಲ್ಲಿ ವಿಸ್ತಾರವಾದ ಕತ್ತೆಗಳ ಫಾರ್ಮ್ ನಿರ್ಮಾಣ ಮಾಡುವುದಾಗಿ ಪಾಕಿಸ್ತಾನ ಸರ್ಕಾರ ಘೋಷಣೆ ಮಾಡಿದ್ದು, ಅಲ್ಲದೆ ಕತ್ತೆಗಳ ಆರೋಗ್ಯ ನಿರ್ವಹಣೆಗಾಗಿ ಇಲ್ಲಿಯೇ ದೊಡ್ಡ ಪಶು ಆಸ್ಪತ್ರೆ ಕೂಡ ನಿರ್ಮಾಣ ಮಾಡುವುದಾಗಿ ಹೇಳಿದೆ.
ಇನ್ನು ಖೈಬರ್ - ಪಖ್ತುಂಕ್ವಾ ಪ್ರಾಂತ್ಯದಲ್ಲಿ ಸುಮಾರು 70ಸಾವಿರ ಕುಟುಂಬಗಳು ಜೀವನೋಪಾಯಕ್ಕಾಗಿ ಕತ್ತೆಯನ್ನು ನೆಚ್ಚಿಕೊಂಡಿದೆ. ಒಟ್ಟಾರೆ ಪಾಕ್ ಈಗ ಕತ್ತೆ ರಪ್ತು ಮಾಡಿ ಆರ್ಥಿಕವಾಗಿ ಸದೃಢವಾಗಲು ಹೊರಟಿದೆ.