ವಾಶಿಂಗ್ಟನ್ ಫೆ16: ಉಗ್ರವಾದದ ವಿರುದ್ಧ ಹೋರಾಡಲು ಭಾರತಕ್ಕಿರುವ ಎಲ್ಲಾ ಹಕ್ಕುಗಳನ್ನು ಗೌರವಿಸಿತ್ತೇವೆ ಹಾಗೂ ಇದರಲ್ಲಿ ಯಾವುದೇ ಹಸ್ತಕ್ಷೇಪ ನಡೆಸಲು ಬಯಸುವುದಿಲ್ಲ ಎಂದು ಯುಎಸ್ ತಿಳಿಸಿದೆ.
ಪುಲ್ವಾಮದಲ್ಲಿ ನಡೆದ ಉಗ್ರ ದಾಳಿಯನ್ನು ಖಂಡಿಸಿ ಭಾರತೀಯ ಭದ್ರತಾ ಸಲಹೆದಾರ ಅಜಿತ್ ಧೋವಲ್ ರವರಿಗೆ ಕಳುಹಿಸಿದ ಸಂದೇಶದಲ್ಲಿ ಯುಎಸ್ ಭದ್ರತಾ ಸಲಹೆದಾರ ಜೋನ್ ಬೋಲ್ಟನ್ ಉಗ್ರವಾದವನ್ನು ಮಟ್ಟಹಾಕುವಲ್ಲಿ ಭಾರತಕ್ಕೆ ಎಲ್ಲಾ ರೀತಿಯ ನೆರವು ನೀಡಲು ತನ್ನ ದೇಶ ಸನ್ನದ್ಧವಾಗಿದೆ ಎಂದು ತಿಳಿಸಿದ್ದಾರೆ. ಉಗ್ರವಾದವನ್ನು ಪ್ರೋತ್ಸಾಹಿಸುವ ಪಾಕಿಸ್ಥಾನದ ನಿಲುವನ್ನು ಅಂಗೀಕರಿಸಲು ಸಾಧ್ಯವಿಲ್ಲ. ಅಧಿಕೃತವಾಗಿ ಪಾಕಿಸ್ಥಾನಕ್ಕೆ ಈ ಬಗ್ಗೆ ತಿಳಿಸಲಾಗುವುದು ಎಂದು ಹೇಳಿದ್ದಾರೆ.
ಉಗ್ರ ದಾಳಿಯನ್ನು ಖಂಡಿಸಿ ಯುಎಸ್ ಸ್ಟೇಟ್ ಸೆಕ್ರೆಟರಿ ಮೈಕ್ ಪೋಂಪಿ ಸಮಾನ ಹೇಳಿಕೆ ನೀಡಿದ್ದರು. ಉಗ್ರವಾದದ ವಿರುದ್ಧ ಸಮರ ಸಾರಿದ ಭಾರತಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಉಗ್ರರಿಗೆ ಎಲ್ಲಾ ರೀತಿಯ ನೆರವು ನೀಡುತ್ತಿರುವ ಪಾಕಿಸ್ಥಾನ ತನ್ನ ಧೋರಣೆಯಲ್ಲಿ ಬದಲಾವಣೆ ತಂದು ಉಗ್ರವಾದವನ್ನು ನಿರ್ಮೂಲನ ಮಾಡುವಲ್ಲಿ ಸಹಕರಿಸಬೇಕಾಗಿದೆ ಎಂದು ಅವರು ತಿಳಿಸಿದ್ದರು.