ವಾಷಿಂಗ್ಟನ್,ಫೆ 22(MSP):ಜೈಶ್ ಇ ಮೊಹ್ಮದ್ ಉಗ್ರ ಸಂಘಟನೆಯ ಅಜರ್ ಮಸೂದ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರ್ಪಡೆಗೊಳಿಸಬೇಕು ಎನ್ನುವ ಪ್ರಯತ್ನಕ್ಕೆ ವಿಶ್ವಸಂಸ್ಥೆಯಲ್ಲಿ ಚೀನಾ ವಿರುದ್ದ ಭಾರತವೂ ಗೆಲುವು ಸಾಧಿಸಿದೆ.
ಇದು ಭಾರತಕ್ಕೆ ದೊರೆತ ಮಹತ್ವದ ಗೆಲುವು ಆಗಿದ್ದು, ಉಗ್ರ ಮಸೂದ್ ಅಜರ್ ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಬೇಕು ಎಂಬ ಭಾರತದ ದಶಕಗಳ ವಾದಕ್ಕೆ ಕೊನೆಗೂ ಮನ್ನಣೆ ಸಿಕ್ಕಂತಾಗಿದೆ. ಪಾಕಿಸ್ತಾನದ ಅಚ್ಚೇ ದೋಸ್ತ್ ಅನಿಸಿಕೊಂಡಿರುವ ಚೀನಾ, ಹಲವು ವರ್ಷಗಳಿಂದ ವಿಶ್ವಸಂಸ್ಥೆಯಲ್ಲಿ ತನ್ನ ವಿಟೋ ಶಕ್ತಿ ಬಳಸಿ, ಜೈಶ್ ಇ ಮೊಹ್ಮದ್ ಉಗ್ರ ಸಂಘಟನೆಯ ಮಸೂದ್ ಅಜರ್ ನನ್ನು ಬಚಾವ್ ಮಾಡುತ್ತಾ ಬರುತ್ತಿತ್ತು. ಅಲ್ಲದೆ ಆತ ಉಗ್ರ ಎನ್ನಲು ಸರಿಯಾದ ಸಾಕ್ಷ್ಯಾಧಾರಗಳನ್ನು ನೀಡಿ ಎಂದು ಕ್ಯಾತೆ ತೆಗೆಯುತ್ತಿತ್ತು.
ಆದರೆ ಇದೀಗ ಚೀನಾದ ಪ್ರಯತ್ನಕ್ಕೆ ಭಾರಿ ಮುಖಭಂಗವಾಗಿದ್ದು, ಭಾರತದ ಜತೆಗೆ ಅಮೆರಿಕ, ಫ್ರಾನ್ಸ್ ಮತ್ತು ರಷ್ಯಾ ಕೂಡ ಉಗ್ರ ಮಸೂದ್ ಅಜರ್ ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲು ಪ್ರಸ್ತಾಪನೆ ಮಾಡುವುದಾಗಿ ಘೋಷಣೆ ಮಾಡಿವೆ.
ಒಟ್ಟಾರೆ ಪುಲ್ವಾಮಾ ಉಗ್ರ ದಾಳಿಯ ನಂತರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಒಬ್ಬಂಟಿಯನ್ನಾಗಿಸುವ ಪ್ರಯತ್ನವನ್ನು ಭಾರತ ಮುಂದುವರಿಸಿದೆ.