ವಾಶಿಂಗ್ಟನ್ ಫೆ23(SB): ಪುಲ್ವಾಮದಲ್ಲಿ ಉಗ್ರರು ನಡೆಸಿದ ಧಾಳಿಗೆ ಪ್ರತಿಕಾರವಾಗಿ ಭಾರತ ಪಾಕಿಸ್ಥಾನಕ್ಕೆ ಸೂಕ್ತ ಎದಿರೇಟು ನೀಡಲಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚನೆ ಕೊಟ್ಟಿದ್ದಾರೆ. ಉಗ್ರರ ಧಾಳಿಯಿಂದಾಗಿ ಎರಡೂ ದೇಶಗಳ ಸಂಬಂಧ ತೀವೃವಾಗಿ ಹದಗೆಟ್ಟಿದೆ ಹಾಗೂ ಪರಿಸ್ಥಿತಿ ವಿಕೋಪಕ್ಕೆ ತಿರುಗದಂತೆ ಅಮೆರಿಕಾ ಕಠಿಣ ಪ್ರಯತ್ನ ಪಡುತ್ತಿದೆ ಎಂದು ಅವರು ತಿಳಿಸಿದ್ದಾರೆ.
ವೈಟ್ ಹೌಸಿನಲ್ಲಿ ಪತ್ರಕರ್ತರನ್ನು ಭೇಟಿ ಮಾಡಿದ ಟ್ರಂಪ್ "ಭಾರತ ಹಾಗೂ ಪಾಕಿಸ್ಥಾನದ ನಡುವೆ ವೈಮನಸ್ಸಿನ ವಾತಾವರಣ ಸೃಶ್ಠಿಯಾಗಿದೆ. ಎರಡೂ ದೇಶಗಳು ಪರಸ್ಪರ ಯುದ್ಧಕ್ಕೆ ಮುಂದಾಗದಂತೆ ನೋಡಿಕೊಳ್ಳುವ ಪ್ರಯತ್ನ ನಾವು ಮಾಡುತ್ತಿದ್ದೇವೆ. ಕಾಶ್ಮೀರದಲ್ಲಿ ಹಲವಾರು ಜೀವಗಳು ಬಲಿಯಾದುವು. ಇನ್ನು ಮುಂದೆ ಇದು ಮರುಕಳಿಸಬಾರದು ಎಂದು ನಮ್ಮ ಇಚ್ಛೆಯಾಗಿದೆ" ಎಂದು ಹೇಳಿದರು.
"ಪಾಕಿಸ್ಥಾನಕ್ಕೆ ಬಲವಾದ ಎದಿರೇಟು ನೀಡಲು ಭಾರತವು ಯೋಚಿಸುತ್ತಿದೆ. ಐವತ್ತು ಸೈನಿಕರನ್ನು ಕಳಕೊಂಡ ಧುಃಖ ಹಾಗೂ ರೋಷ ಅವರಿಗಿದೆ. ನಾನೂ ಭಾರತದ ಈಗಿನ ಮನೋಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತೇನೆ. ಆದುದರಿಂದ ಭಾರತ ಹಾಗೂ ಪಾಕಿಸ್ಥಾನದೊಂದಿಗೆ ಅಮೆರಿಕಾ ನಿರಂತರ ಸಂಪರ್ಕ ನಿರತವಾಗಿದೆ" ಟ್ರಂಪ್ ಸೂಚಿಸಿದರು.