ಅಬುದಾಬಿ,ಫೆ 24 (MSP): ಪರಮಾಣು ಬಾಂಬ್ ಗಳನ್ನು ಹೊಂದಿದ ಎರಡು ರಾಷ್ಟ್ರಗಳ ನಡುವಿನ ಸಂಬಂಧ ಹಳಸಿ, ಅಪಾಯದ ಅಂತಿಮ ಸ್ಥಿತಿ ತಲುಪಿದರೂ ಕೂಡಾ, ಪಾಕಿಸ್ತಾನ ಭಾರತದ ಮೇಲೆ ಪರಮಾಣು ದಾಳಿ ನಡೆಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಪ್ ಹೇಳಿದ್ದಾರೆ.
ಅಬುದಾಬಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪರ್ವೇಜ್ ಮುಷರಪ್ ಭಾರತ ಮತ್ತು ಪಾಕ್ ನಡುವಿನ ಸಂಬಂಧ ಅಪಾಯದ ಸ್ಥಿತಿಯಲ್ಲಿರುವುದು ನಿಜ. ಹಾಗೆಂದು ಪರಮಾಣು ದಾಳಿ ನಡೆಸಲ್ಲ, ಯಾಕೆಂದರೆ ಪಾಕ್ ಮುಂದುವರಿದು ಒಂದು ಪರಮಾಣು ಅಣ್ವಸ್ತ್ರ ದಾಳಿ ನಡೆಸಿದ್ರೆ ವಿರೋಧಿ ರಾಷ್ಟ್ರ ಭಾರತ ನಮ್ಮ ಮೇಲೆ 20 ಬಾಂಬ್ ಗಳನ್ನು ಹಾಕಿ ನಮ್ಮನ್ನು ನಿರ್ನಾಮ ಮಾಡುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಪರಮಾಣು ದಾಳಿಯ ಸಾಧ್ಯತೆ ಇಲ್ಲ. ನಾವು ಮೊದಲು ಭಾರತದ ಮೇಲೆ 50 ಬಾಂಬ್ ಗಳನ್ನು ಹಾಕಿ ಭಾರತವನ್ನು ನಿರ್ನಾಮ ಮಾಡಬೇಕು, ಹೀಗಾಗಿ ಮೊದಲು 50 ಬಾಂಬ್ ಗಳನ್ನು ಹಾಕಲು ಪಾಕಿಸ್ತಾನ ಸಿದ್ದ ಇದೆಯಾ? ಎಂದು ಮುಷರಪ್ ಹೇಳಿದ್ದಾರೆ.