ರಿಯಾದ್,ಫೆ 25(MSP): ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಯ ನಂತರದಲ್ಲಿ ಅಮೆರಿಕದೊಂದಿಗೆ ಸಂಬಂಧ ಹಳಸಿಹೋಗಿರುವ ಸಂದರ್ಭದಲ್ಲೆ ರಾಜಕುಮಾರಿ ರಿಮಾ ಬಿಂತ್ ಬಂದಾರ್ ಅವರನ್ನು ಅಮೆರಿಕ ರಾಯಭಾರಿಯಾಗಿ ಸೌದಿ ಅರೇಬಿಯಾ ನೇಮಕ ಮಾಡಿದೆ. ಈ ಮೂಲಕ ಅಮೆರಿಕದ ಮೊಟ್ಟ ಮೊದಲ ಸೌದಿ ಮಹಿಳಾ ರಾಯಭಾರಿ ಎಂಬ ಹೆಗ್ಗಳಿಕೆಗೆ ರಿಮಾ ಪಾತ್ರರಾಗಿದ್ದಾರೆ.
ರಾಜಕುಮಾರಿ ರಿಮಾ ಅವರು ರಾಜಕುಮಾರ ಖಲಿದ್ ಬಿನ್ ಸಲ್ಮಾನ್ ಅವರ ಸ್ಥಾನಕ್ಕೆ ನಿಯೋಜಿಸಿ, ಸಂದಿಗ್ಧ ಪರಿಸ್ಥಿತಿಯಲ್ಲೂ ಸೌದಿ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ರಾಜಕುಮಾರ ಖಲೀದ್ರನ್ನು ಈಗ ಉಪ ರಕ್ಷಣಾ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಸೌದಿಯಲ್ಲಿ ಈಗ ಕಂಡುಬರುತ್ತಿರುವ ಮಹಿಳಾ ಸಬಲೀಕರಣದ ಬೆಳವಣಿಗೆಯ ಹಿಂದೆ ರಿಮಾ ಅವರ ಅಪಾರ ಶ್ರಮವಿದೆ ಎಂದು ಹೇಳಲಾಗುತ್ತದೆ.
ಅಕ್ಟೋಬರ್ನಲ್ಲಿ ಟರ್ಕಿಯ ಇಸ್ತಾಂಬುಲ್ನಲ್ಲಿರುವ ಸೌದಿ ರಾಯಭಾರ ಕಚೇರಿಯಲ್ಲಿ ಪತ್ರಕರ್ತ ಖಶೋಗಿ ಹತ್ಯೆ ನಂತರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೌದಿ ವಿರುದ್ಧ ಎದ್ದ ಅಸಮಾಧಾನ ಶಮನಗೊಳಿಸಲು ಈ ಪ್ರಯತ್ನ ಎಂದು ಹೇಳಲಾಗುತ್ತಿದೆ.