ಇಸ್ಲಾಮಾಬಾದ್, ಫೆ 26(SM): ಪಾಕ್ ಉಗ್ರರಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಪಾಕ್ ಉಗ್ರ ನೆಲೆಗಳ ಮೇಲೆ ನಡೆಸಿದ ದಾಳಿಯ ಬಳಿಕ ಪಾಕಿಸ್ತಾನ ಭಾರತದ ವಿರುದ್ಧ ತೊಡೆ ತಟ್ಟಿ ನಿಲ್ಲಲು ಮುಂದಾಗಿದೆ. ಭಾರತ ಚಲನ ಚಿತ್ರಗಳಿಗೆ ಪಾಕಿಸ್ತಾನ ನಿಷೇಧ ಹೇರಿದೆ.
ಭಾರತವು ಗಡಿ ನಿಯಂತ್ರಣ ರೇಖೆಯನ್ನು ದಾಟಿ, ಪಾಕ್ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಿದೆ ಎಂದು ಪಾಕ್ ಹೇಳುತ್ತಿದ್ದು, ಭಾರತದ ಕಾರ್ಯಾಚರಣೆಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಪಾಕಿಸ್ತಾನದಲ್ಲಿ ಭಾರತೀಯ ಸಿನಿಮಾಗಳಿಗೆ ಅಲ್ಲಿನ ಸಿನೆಮಾ ಎಕ್ಸಿಬಿಟರ್ಸ್ ಅಸೋಸಿಯೇಷನ್ ನಿಷೇಧ ಹೇರಿದೆ. ಅಲ್ಲದೆ ಭಾರತದ ಜಾಹಿರಾತುಗಳಿಗೂ ಅಲ್ಲಿ ನಿಷೇಧ ಹೇರಲಾಗಿದೆ ಎಂದು ತಿಳಿದು ಬಂದಿದೆ.
ಬಾಲಿವುಡ್ ಸಿನಿಮಾಗಳಿಗೆ ಪಾಕಿಸ್ತಾನದಲ್ಲಿ ಉತ್ತಮ ಮಾರುಕಟ್ಟೆ ಇದೆ. ಬಾಲಿವುಡ್ ಬಹುತೇಕ ಸಿನಿಮಾಗಳು ಪಾಕಿಸ್ತಾನದಲ್ಲಿ ಬಿಡುಗಡೆ ಆಗುತ್ತವೆ ಮತ್ತು ಉತ್ತಮವಾಗಿ ಪ್ರದರ್ಶನವೂ ಕಾಣುತ್ತವೆ. ಭಾರತದಲ್ಲಿ ಈಗಾಗಲೇ ಪಾಕಿಸ್ತಾನ ಕಲಾವಿದರಿಗೆ ನಿಷೇಧ ಹೇರಲಾಗಿದೆ.
ಪಾಕ್ ಜೊತೆ ಕ್ರಿಕೆಟ್ ಆಡಬಾರದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ವೈಮಾನಿಕ ದಾಳಿಯಿಂದ ಸರ್ಜಿಕಲ್ ಸ್ಟ್ರೈಕ್ ಗಿಂತ ದೊಡ್ಡ ಮಟ್ಟದ ಹಾನಿ ಪಾಕಿಸ್ತಾನವು ಇಸ್ಲಾಮಾಬಾದ್ನಲ್ಲಿರುವ ಭಾರತೀಯ ರಾಯಭಾರಿಗೆ ಸಮನ್ಸ್ ನೀಡಿದ್ದು, ಭಾರತದ ಜೆಟ್ ವಿಮಾನಗಳು ಅಕ್ರಮವಾಗಿ ಭಾರತದ ಗಡಿ ಪ್ರವೇಶಿಸಿದೆ ಎಂದು ಆರೋಪಿಸಿದೆ. ಮತ್ತು ಪಾಕ್ ತನ್ನ ರಕ್ಷಿಸಿಕೊಳ್ಳುವ ಹಕ್ಕನ್ನು ಚಲಾಯಿಸುವುದಾಗಿ ಎಚ್ಚರಿಕೆ ನೀಡಿದೆ.