ನವದೆಹಲಿ, ಡಿ 06 (DaijiworldNews/HR): ಉಕ್ರೇನ್ನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಅವರು ರಷ್ಯಾದ ಅಗ್ಗದ ತೈಲದ ಆಮದು ಕುರಿತು ಭಾರತದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಂವಾದವೊಂದರಲ್ಲಿ ಸಚಿವ ಡಿಮಿಟ್ರೋ ಕುಲೆಬಾ, 'ಉಕ್ರೇನಿಯನ್ನರು ರಷ್ಯಾದ ಆಕ್ರಮಣದಿಂದ ಬಳಲುತ್ತಿದ್ದಾರೆ ಮತ್ತು ಪ್ರತಿದಿನ ಸಾಯುತ್ತಿದ್ದಾರೆ ಎಂಬ ಅಂಶದಿಂದ ರಷ್ಯಾ ತೈಲವನ್ನು ಅಗ್ಗದ ಬೆಲೆಗೆ ಖರೀದಿಸಲು ಭಾರತಕ್ಕೆ ಅವಕಾಶವಿದೆ. ನಮ್ಮ ಸಂಕಟದ ಕಾರಣದಿಂದ ನೀವು ಹೆಚ್ಚು ಪ್ರಯೋಜನ ಪಡೆದರೆ, ನಿಮ್ಮ ಹೆಚ್ಚಿನ ಸಹಾಯವನ್ನು ನಮಗೆ ತಿಳಿಸುವುದು ಒಳ್ಳೆಯದು ಎಂದಿದ್ದಾರೆ.
ಇನ್ನು ಈ ವರ್ಷದ ಫೆಬ್ರವರಿ ಮತ್ತು ನವೆಂಬರ್ ತಿಂಗಳ ನಡುವೆ ಯುರೋಪಿಯನ್ ಯೂನಿಯನ್ ಮುಂದಿನ 10 ದೇಶಗಳಿಗಿಂತ ಹೆಚ್ಚಿನ ಪಳೆಯುಳಿಕೆ ಇಂಧನವನ್ನು ರಷ್ಯಾದಿಂದ ಆಮದು ಮಾಡಿಕೊಂಡಿದೆ ಎಂದು ಸೋಮವಾರ ಭಾರತೀಯ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿಕೆಗೆ ಕುಲೇಬಾ ಪ್ರತಿಕ್ರಿಯಿಸಿದ್ದಾರೆ.