ನವದೆಹಲಿ, ಮಾ 01(SM): ಪಾಕಿಸ್ತಾನ ಮತ್ತೆ ತನ್ನ ಕುತಂತ್ರ ಬುದ್ಧಿಯನ್ನು ತೋರುತ್ತಿದೆ. ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್ ಬಿಡುಗಡೆಗೆ ಪಾಕ್ ಮತ್ತೆ ಮತ್ತೆ ವಿಳಂಬ ನೀತಿಯನ್ನು ಅನುಸರಿಸುತ್ತಿದೆ. ಕೇವಲ 15 ನಿಮಿಷದಲ್ಲಿ ಮುಗಿಸಬೇಕಿದ್ದ ಪ್ರಕ್ರಿಯೆಗಳನ್ನು 4 ಗಂಟೆಗೂ ಅಧಿಕ ಕಾಲ ವಿಳಂಬಗೊಳಿಸಿದ್ದು ಪಾಕ್ ನ ಕುತಂತ್ರ ಬುದ್ಧಿ ಗೋಚರವಾಗುತ್ತಿದೆ.
ಒಂದು ಹಂತದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಗುರುವಾರದಂದು ಅಭಿನಂದನ್ ಬಿಡುಗಡೆಗೆ ಘೋಷಣೆ ಮಾಡಿದ್ದರು. ಆದರೆ, ಅದರ ಬಳಿಕ ಪಾಕ್ ಪ್ರಧಾನಿ ಮೇಲೆ ಸೇನೆ ಹಾಗೂ ಐಎಸ್ ಐ ಒತ್ತಡವನ್ನು ಹೇರುತ್ತಿದೆ ಎನ್ನಲಾಗಿದೆ. ಪಾಕಿಸ್ತಾನದಲ್ಲಿ ಸೇನೆ ಹಾಗೂ ಐಎಸ್ ಐ ಪ್ರಭಾವ ಹೆಚ್ಚಿದ್ದು, ಪ್ರಧಾನಿಯವರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಸೇನೆ ಹಾಗೂ ಐಎಸ್ ಐ ಪ್ರಧಾನಿಗಳ ಮೇಲೆ ಒತ್ತಡವನ್ನು ಹೋರಿದೆ ಎನ್ನಲಾಗಿದೆ.
ಇದೇ ಕಾರಣಕ್ಕಾಗಿ ಅಭಿನಂದ್ ಭಾರತಕ್ಕೆ ಬಿಡಲು ಪಾಕ್ ವಿಳಂಬ ನೀತಿಯನ್ನು ಅನುಸರಿಸುತ್ತಿದೆ. ಪಾಕ್ ನಿಂದ ಬಿಡುಗಡೆಗೊಳಿಸುವ ವೇಳೆ ವಿಳಂಬಗೊಳಿಸಿದ್ದ ಪಾಕ್, ಬಳಿಕ ಲಾಹೋರ್ ನಲ್ಲೂ ವಿಳಂಬ ನೀತಿಯನ್ನು ಅನುಸರಿಸಿದೆ. ಅದೇ ಬುದ್ದಿಯನ್ನು ವಾಘಾ ಗಡಿಯಲ್ಲೂ ಅನುಸರಿಸಿದ್ದು, ಕೇವಲ 15 ನಿಮಿಷಗಳಲ್ಲಿ ಮುಗಿಯಬೇಕಿದ್ದ ಪ್ರಕ್ರಿಯೆ 4 ಗಂಟೆಗೂ ಅಧಿಕ ಅವಧಿಯನ್ನು ಪಡೆದುಕೊಂಡಿದೆ.