ಖಾರ್ತೂಮ್,ಮಾ.02(AZM): ಸುಡಾನಿನಲ್ಲಿ ಹಲವು ವಾರಗಳಿಂದ ಅಧ್ಯಕ್ಷ ಉಮರುಲ್ ಬಶೀರ್ ಅವರ ಆಡಳಿತದ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು, ಈ ಹಿನ್ನಲೆ ಬಶೀರ್ ಅವರು ಅಧಿಕಾರವನ್ನು ಆಡಳಿತ ಪಕ್ಷದ ಮುಖ್ಯಸ್ಥನಿಗೆ ವಹಿಸಿಕೊಟ್ಟಿದ್ದಾರೆ.
ಈ ಮೂಲಕ ಸುಡಾನ್ ಕಾಂಗ್ರೆಸ್ ಪಾರ್ಟಿಯ ಕಾರ್ಯಾಧ್ಯಕ್ಷ ಅಹ್ಮದ್ ಹಾರೂನ್ರನ್ನು ಉಪ ಮುಖ್ಯಸ್ಥನನ್ನಾಗಿ ನೇಮಿಸಿದ್ದಾರೆ. ಬಶೀರ್ ಅವರು ಕಳೆದ ವಾರ ಸುಡಾನಿನಲ್ಲಿ ಒಂದು ವರ್ಷ ತುರ್ತು ಪರಿಸ್ಥಿತಿಯನ್ನು ಘೋಷಿಸಿ ಸರಕಾರವನ್ನು ವಿಸರ್ಜಿಸಿದ್ದರು. ಕಳೆದ ವರ್ಷ ಡಿಸೆಂಬರಿನಿಂದ ಸುಡಾನ್ನಲ್ಲಿ ಜನರು ಬೀದಿಗಳಿದು ಬಶೀರ್ ವಿರುದ್ಧ ಪ್ರತಿಭಟನೆ ನಡೆಸುತ್ತಾ ಬಂದಿದ್ದು, ಈ ವೇಳೆ ಪೊಲೀಸರೊಂದಿಗೆ ಘರ್ಷಣೆ ನಡೆದು ಹಲವರು ಮೃತಪಟ್ಟಿದ್ದರು.
ಹಾರೂನ್ ಸುಡಾನ್ ಕಾಂಗ್ರೆಸ್ ಪಾರ್ಟಿಯ ಕಾರ್ಯಾಧ್ಯಕ್ಷರಾಗಿ ಪಾರ್ಟಿಯ ಮುಂದಿನ ಸಭೆಯಲ್ಲಿ ಆಯ್ಕೆ ಆಗಲಿದ್ದು, ಪಾರ್ಟಿಯ ಹೊಸ ಅಧ್ಯಕ್ಷನನ್ನೂ ಕೂಡಾ ಆಯ್ಕೆ ಮಾಡಲಾಗುವುದು ಎಂದು ಕಾಂಗ್ರೆಸ್ ಪಾರ್ಟಿ ತಿಳಿಸಿದೆ. ಈ ಬದಲಾವಣೆಯನ್ನು ಶುಕ್ರವಾರ ಘೋಷಿಸಲಾಗಿದ್ದು ತಾನು ಎಲ್ಲ ಪಾರ್ಟಿಗಳ ಕುರಿತು ತಟಸ್ಥ ನಿಲುವು ಸ್ವೀಕರಿಸುತ್ತೇನೆ ಎಂದು ಬಶೀರ್ ಹೇಳಿದರು. ಆದರೆ ಎನ್ಸಿಪಿಯ ಮುಖ್ಯಸ್ಥನ ಸ್ಥಾನ ತೊರೆಯುವ ಸುಳಿವನ್ನು ಅವರು ನೀಡಿಲ್ಲ. ಆದರೆ ಎನ್ಸಿಪಿಯ ಹೇಳಿಕೆ ಅಸ್ಪಷ್ಟವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಬೆಟ್ಟು ಮಾಡಿದ್ದಾರೆ.