ಲಂಡನ್,ಮಾ.04(AZM): ಅತ್ಯಂತ ಸುರಕ್ಷತೆಯಿಂದ ಓಡಾಡುವ ಕಾರು ಯಾರಿಗೆ ತಾನೆ ಬೇಡ ಹೇಳಿ? ಟಾಟಾ ಒಡೆತನದ ಲ್ಯಾಂಡ್ ರೋವರ್ ರೇಂಜ್ ರೋವರ್ ಕಾರು ಕಂಪನಿ ಇದೀಗ ಇಂತಹ ಒಂದು ಕಾರು ಬಿಡುಗಡೆ ಮಾಡಲು ಸಜ್ಜಾಗಿದ್ದು, ಇದೀಗ ಬುಲೆಟ್ ಪ್ರೂಫ್ ಹಾಗೂ ಬಾಂಬ್ ಬ್ಲಾಸ್ಟ್ ಪ್ರೊಟೆಕ್ಷನ್ ನೀಡುವ ರೇಂಜ್ ರೋವರ್ ಕಾರನ್ನ ಫರ್ನ್ಬರ್ಗ್ ಅಂತಾರಾಷ್ಟ್ರೀಯ ಮೋಟಾರ್ ಶೋನಲ್ಲಿ ಪ್ರದರ್ಶನಕ್ಕಿಡಲಾಗಿದೆ.
ಬುಲೆಟ್ ಪ್ರೂಫ್ ಹಾಗೂ ಬಾಂಬ್ ಬ್ಲಾಸ್ಟ್ ಪ್ರೊಟೆಕ್ಷನ್ ನೀಡುವ ರೇಂಜ್ ರೋವರ್ ಕಾರಲ್ಲಿ ತುರ್ತು ಸಂದರ್ಭದಲ್ಲಿ ಕಾರಿನಿಂದ ಹೊರಬಲು ತುರ್ತು ನಿರ್ಗಮನ ಕೂಡ ಲಭ್ಯವಿದೆ. ತುರ್ತು ಅವಶ್ಯತೆ ಬಿದ್ದಾಗ ಕಾರಿನ ಸೈರನ್ ಬಡಿದುಕೊಳ್ಳುತ್ತದೆ. ಕಾರಿನ ಗಾಜು ಅಥವಾ ಯಾವುದೇ ಭಾಗಕ್ಕೆ ಬುಲೆಟ್ ತಾಗಿದರೆ ಒಳಗಿದ್ದವರಿಗೆ ಯಾವುದೇ ಸಮಸ್ಯೆಯೂ ಕೂಡಾ ಆಗುವುದಿಲ್ಲ.
ಈ ಕಾರು ಸಣ್ಣ ಬಾಂಬ್ ಬ್ಲಾಸ್ಟ್ ತಡೆಯುವ ಸಾಮರ್ಥ್ಯ ಕೂಡಾ ಹೊಂದಿದ್ದು, 5.0 ಲೀಟರ್ ಸೂಪರ್ ಚಾರ್ಜಡ್ ವಿ8 ಪೆಟ್ರೋಲ್ ಎಂಜಿನ್ ಹೊಂದಿದೆ. ಕಾರಿನ ಗರಿಷ್ಠ ವೇಗ 193ಕೆಮ್ ಪಿಎಚ್ ಆಗಿದ್ದು, ರೇಂಜ್ ರೋವರ್ ಕಾರಿನ ಬೆಲೆ 10 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.