ನವದೆಹಲಿ,ಮಾ 08 (MSP): ಟಿ.ಬಿ ಚಿಕಿತ್ಸೆಯ ಬಗ್ಗೆ ಮಹತ್ವದ ಸಂಶೋದನೆ ನಡೆಸಿರುವ ಭಾರತದ ಸೌಮ್ಯ ಸ್ವಾಮಿನಾಥನ್ ಅವರನ್ನು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿಯಾಗಿ ನೇಮಕ ಮಾಡಲಾಗಿದೆ. ಈ ಹಿಂದೆ ಇವರು ಡಬ್ಲ್ಯುಎಚ್ ಒ ಸಂಸ್ಥೆಯ ಉಪ ಮಹಾನಿರ್ದೇಶಕಿಯಾಗಿದ್ದರು. ಇವರು ಹಸಿರು ಕಾಂತ್ರಿ ರೂವಾರಿ ಸ್ವಾಮಿನಾಥನ್ ಅವರ ಮಗಳಾಗಿದ್ದಾರೆ.
ಡಬ್ಲ್ಯುಎಚ್ ಒ ಸಂಸ್ಥೆಯ ಸುಧಾರಣಾ ಕ್ರಮಗಳ ಭಾಗವಾಗಿ ಈ ನೇಮಕ ಮಾಡಲಾಗಿದ್ದು, ಮೂವರು ಉಪ ಮಹಾನಿರ್ದೇಶಕರಲ್ಲಿ ಒಬ್ಬರಾಗಿದ್ದ ಸೌಮ್ಯಾ ಸ್ವಾಮಿನಾಥನ್ ಈ ಹುದ್ದೆ ಅಲಂಕರಿಸಿರುವ ಪ್ರಥಮ ಭಾರತೀಯಳೆನ್ನುವುದು ವಿಶೇಷ.
ಮುಂದಿನ ೫ ವರ್ಷಗಳಲ್ಲಿ ಸಂಸ್ಥೆಯು ತನ್ನ ಮುನ್ನೂರು ಬಿಲಿಯನ್ ಗುರಿಗಳನ್ನು ಪೂರೈಸಿಕೊಳ್ಳುವುದು ಅಗತ್ಯವಿದೆ."ಸಾರ್ವತ್ರಿಕ ಆರೋಗ್ಯ ರಕ್ಷಣೆಯಿಂದ ಒಂದು ಶತಕೋಟಿ ಜನರಿಗೆ ಲಾಭವಾಗಿದ್ದು ಈಗ ಸಮಯ ಬದಲಾಗಿದೆ. ಹೀಗಾಗಿ ಅಗತ್ಯಕ್ಕೆ ತಕ್ಕಂತೆ ನಮ್ಮ ಧ್ಯೇಯೋದ್ದೇಶವನ್ನು ಬದಲಿಸಿಕೊಳ್ಳುತ್ತಿದ್ದೇವೆ" ಡಬ್ಲ್ಯುಎಚ್ ಒ ಹೇಳಿಕೆ ತಿಳಿಸಿದೆ.