ಇಸ್ಲಾಮಾಬಾದ್, ಮಾ 08(SM): ಇತ್ತೀಚೆಗಷ್ಟೇ ಪಾಕಿಸ್ತಾನದ ಬಾಲಕೋಟ್ನಲ್ಲಿ ಉಗ್ರರ ಅಡಗುತಾಣಗಳ ಮೇಲೆ ಭಾರತೀಯರು ದಾಳಿ ನಡೆಸಿದ್ದರು. ಇದರ ವಿರುದ್ಧ ಪಾಕ್ ಸಂಚು ರೂಪಿಸುತ್ತಿದೆ ಎಂಬ ಮಾಹಿತಿ ಹರಿದಾಡುತ್ತಿತ್ತು. ಇದೀಗ ಅದು ಸತ್ಯವಾಗಿದೆ. ದಾಳಿ ನಡೆಸಿದ ಭಾರತೀಯ ವಾಯುಪಡೆ ಪೈಲಟ್ಗಳ ಮೇಲೆ ಪಾಕಿಸ್ತಾನ ಎಫ್ಐಆರ್ ದಾಖಲಿಸಿದೆ.
ಭಾರತ ನಡೆಸಿದ ಏರ್ಸ್ಟ್ರೈಕ್ನಿಂದಾಗಿ ಬಾಲಕೋಟ್ನಲ್ಲಿ 19 ಪೈನ್ ಮರಗಳು ಧರೆಗುರುಳಿವೆ ಎಂದು ಎಫ್ಐಆರ್ನಲ್ಲಿ ಪಾಕಿಸ್ತಾನ ಅರಣ್ಯ ಇಲಾಖೆ ದೂರಿದೆ. ಅಲ್ಲದೆ ಒಂದು ಹೆಜ್ಜೆ ಮುಂದೆ ಇಟ್ಟುರುವಂತಹ ಪಾಕಿಸ್ತಾನ, ತನ್ನ ಪ್ರದೇಶದ ಪ್ರವಾಸಿ ತಾಣಗಳಿಗೆ ಭಾರತ ಧಕ್ಕೆ ತಂದಿದೆ ಎಂದು ವಿಶ್ವಸಂಸ್ಥೆಗೆ ದೂರು ಕೊಡಲೂ ನಿರ್ಧರಿಸಿದೆ ಎನ್ನಲಾಗಿದೆ.
ಕಳೆದ ಫೆ. 26ರಂದು ಬಾಲಕೋಟ್ನಲ್ಲಿದ್ದ ಉಗ್ರರ ಅಡಗುತಾಣಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿತ್ತು. ಇದರಲ್ಲಿ ಹಲವು ಉಗ್ರರು ಹತ್ಯೆಯಾಗಿದ್ದರು.