ವಾಶಿಂಗ್ಟನ್, ಮಾ.09(AZM): ಆಡು ಮೇಯರ್ ಆಗಿರೋದು ನೀವು ಎಲ್ಲಿಯಾದರೂ ನೋಡಿದ್ದೀರಾ? ಹಾಗದರೆ ಅಮೆರಿಕದ ಫೇರ್ ಹ್ಯಾವನ್ ಪಟ್ಟಣಕ್ಕೆ ಒಂದು ಸಲ ಭೇಟಿ ನೀಡಿದರೆ ಅಲ್ಲಿನ ಮೇಯರ್ ಆಡನ್ನು ನಿಮಗೆ ನೋಡಬಹುದು. ಅಮೆರಿಕದ ವರ್ಮಾಂಟ್ ರಾಜ್ಯದ ಪಟ್ಟಣವೊಂದರಲ್ಲಿ ಅಲ್ಲಿನ ಜನರು ಆಡೊಂದನ್ನು ಮೇಯರ್ ಆಗಿ ಆಯ್ಕೆ ಮಾಡಿದ್ದಾರೆ.
2,500 ಜನಸಂಖ್ಯೆ ಹೊಂದಿರುವ 'ಫೇರ್ ಹ್ಯಾವನ್' ಪಟ್ಟಣದ ಮೇಯರ್ ಆಗಿ ಮೂರು ವರ್ಷದ ಲಿಂಕನ್ ಎಂಬ ಆಡು ಆಯ್ಕೆಗೊಂಡಿದೆ. ,
ಮಂಗಳವಾರ ನಡೆದ ಮತದಾನದಲ್ಲಿ ಲಿಂಕನ್, ಕ್ರಿಸ್ಟಲ್ ಎಂಬ ಹೆಸರಿನ ಇಲಿ ಹಾಗೂ ಹಲವು ನಾಯಿಗಳು ಮತ್ತು ಬೆಕ್ಕುಗಳು ಸೇರಿದಂತೆ 15 ಅಭ್ಯರ್ಥಿಗಳನ್ನು ಸೋಲಿಸಿತು.
ಫೇರ್ ಹ್ಯಾವನ್ಗೆ ಅಧಿಕೃತ ಮೇಯರ್ ಇಲ್ಲದ ಕಾರಣ ನಗರ ನಿರ್ವಾಹಕ ಜೋಸೆಫ್ ಗಂಟರ್ ಮೇಯರ್ರ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ.
ಮಿಶಿಗನ್ ರಾಜ್ಯದ ಒಮೇನ ಎಂಬ ಗ್ರಾಮದಲ್ಲಿ 'ಸ್ವೀಟ್ ಟಾರ್ಟ್' ಎಂಬ ಬೆಕ್ಕನ್ನು ಗ್ರಾಮದ ಮುಖ್ಯಸ್ಥನಾಗಿ ಆಯ್ಕೆ ಮಾಡಲಾಗಿದೆ ಎಂಬ ವರದಿಯನ್ನು ಓದಿದ ಬಳಿಕ,ಜೋಸೆಫ್ ಗಂಟರ್ ಆಟದ ಅಂಥಹದ್ದೇ ಒಂದು ಚುನಾವಣೇಯನ್ನು ನಡೆಸಿದ್ದಾರೆ.