ಅಮೇರಿಕಾ,ಮಾ,13(AZM):ಮಂಗಳ ಗ್ರಹಕ್ಕೆ ಮೊದಲು ಕಾಲಿಡುವ ವ್ಯಕ್ತಿ ಓರ್ವ ಮಹಿಳೆಯಾಗಿರುವಳು ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಮುಖ್ಯಸ್ಥ ಜಿಮ್ ಬ್ರೈಡನ್ಸ್ಟೈನ್ ಅವರು ತಿಳಿಸಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನ 'ಸೈನ್ಸ್ ಫ್ರೈಡೆ' ಎಂಬ ರೇಡಿಯೋ ಶೋನಲ್ಲಿ ಈ ಕುರಿತು ಮಾತನಾಡಿದ ಅವರು, ಮೆರಿಕದ ಬಾಹ್ಯಾಕಾಶ ಸಂಸ್ಥೆಯ ಮುಂದಿನ ಹಲವಾರು ಯೋಜನೆಗಳಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ. ಹಾಗಾಗಿ, ಮಂಗಳ ಗ್ರಹಕ್ಕೂ ಮೊದಲು ಮಹಿಳೆಯೇ ಹೋಗಲಿದ್ದು, ಆ ಮಹಿಳೆ ಯಾರು ಎಂಬುವುದನ್ನು ಜಿಮ್ ಅವರು ಬಹಿಂರಗಪಡಿಸಿಲ್ಲ.
ಇನ್ನು, ನಮ್ಮಲ್ಲಿ ವಿಭಿನ್ನ ಪ್ರತಿಭೆಗಳಿರುವ ಮಹಿಳೆಯರಿದ್ದಾರೆ. ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಛಾಪು ಮೂಡಿಸಿದ್ದಾರೆ. ಇನ್ನು ಬಾಹ್ಯಾಕಾಶದಲ್ಲಿಯೂ ಮಹಿಳೆಯರು ತಮ್ಮ ಪ್ರತಿಭೆ ತೋರಲಿದ್ದಾರೆ. ಸದ್ಯದಲ್ಲಿಯೇ ಮೊದಲ ಬಾರಿ ಮಹಿಳೆಯೋರ್ವಳು ಚಂದ್ರನ ಮೇಲೆ ಕಾಲಿರಿಸಲಿದ್ದಾರೆ ಎಂದೂ ಜಿಮ್ ಬ್ರೈಡನ್ಸ್ಟೈನ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.