ವಾಷಿಂಗ್ಟನ್,ಮಾ 14 (MSP): ಪುಲ್ವಾಮ ದಾಳಿಯ ರೂವಾರಿ , ಜೈಷ್–ಎ-ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ನಿರ್ಣಯಕ್ಕೆ ಚೀನಾ ತನ್ನ ಮೊಂಡು ಬುದ್ದಿಯನ್ನು ಪ್ರದರ್ಶಿಸಿದ್ದು . ಇದಕ್ಕೆ ವಿರೋಧ ವ್ಯಕ್ತಪಡಿಸಿರುವುದಕ್ಕೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಭಾರತದ ಪ್ರಯತ್ನಕ್ಕೆ ಸತತ ನಾಲ್ಕನೇ ಬಾರಿಗೆ ಚೀನ ತಾಂತ್ರಿಕ ಕಾರಣ ನೀಡಿ ತಡೆಯೊಡ್ಡಿದ್ದು ಈ ಮೂಲಕ ತನ್ನ ಪರಮಾಪ್ತ ದೇಶ ಪಾಕಿಸ್ತಾನಕ್ಕೆ ಬೆಂಬಲ ನೀಡುವ ಕಳ್ಳಾಟ ಮುಂದುವರಿಸಿದೆ. ಮಸೂದ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸುವುದಕ್ಕೆ ನಿರಂತರವಾಗಿ ಅಡ್ಡಿಯಾಗುತ್ತಿರುವ ಚೀನಾ ವಿರುದ್ಧ ಈಗ ವಿಶ್ವಸಂಸ್ಥೆ ರಾಷ್ಟ್ರಗಳು ಇದೀಗ ತಿರುಗಿಬಿದ್ದಿದ್ದು, ಚೀನಾ ಹೀಗೆ ತನ್ನ ಖ್ಯಾತೆ ಮುಂದುವರಿಸಿದರೆ ನಾವು ಬೇರೆ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಎಚ್ಚರಿಕೆ ನೀಡಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಲ್ಖೈದಾ ನಿರ್ಬಂಧ ಸಮಿತಿ ಅಡಿಯಲ್ಲಿ ಮಸೂದ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ಪ್ರಸ್ತಾವವನ್ನು ಫ್ರಾನ್ಸ್, ಬ್ರಿಟನ್ ಮತ್ತು ಅಮೆರಿಕ ಫೆಬ್ರುವರಿ 27ರಂದು ಮಂಡಿಸಿದ್ದವು. ಇದನ್ನು ಚೀನಾ ವಿರೋಧಿಸಿದೆ. ಈ ನಡುವೆ ಭಾರತ ಮಸೂದ್ ಅಜರ್ನನ್ನು ಜಾಗತಿಕಉಗ್ರ ಎಂದು ಘೋಷಿಸುವ ನಿರ್ಣಯವನ್ನು ಬೆಂಬಲಿಸಿರುವ ದೇಶಗಳಿಗೆ ಭಾರತ ಧನ್ಯವಾದ ತಿಳಿಸಿದೆ.