ಇಂಡೋನೇಶಿಯಾ,ಮಾ17(AZM):ಇಂಡೋನೇಶಿಯಾದಲ್ಲಿ ಉಂಟಾದ ಭೀಕರ ಪ್ರವಾಹಕ್ಕೆ 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ,21 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಪ್ರವಾಹದಲ್ಲಿ ಹಲವರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆ.
ಇಂಡೋನೆಷ್ಯಾದ ಪೂರ್ವ ಪ್ರಾಂತದ ಪಪುವಾದ ಸೆಂಟಾನಿ ಪ್ರದೇಶದಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದ ಪ್ರವಾಹವುಂಟಾಗಿದೆ. ಪ್ರವಾಹದ ಭೀಕರತೆಗೆ ಹಲವು ಮನೆಗಳು ನೀರುಪಾಲಾಗಿದ್ದು, ಲಕ್ಷಾಂತರ ಹೆಕ್ಟೇರ್ ಕೃಷಿ ಪ್ರದೇಶ ನಾಶವಾಗಿದೆ. ಹಾಗೂ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ ಎಂದು ರಾಷ್ಟ್ರೀಯ ದುರಂತದ ಸಂಸ್ಥೆಯ ವಕ್ತಾರು ಸುಟೋಪೊ ಪುವೋ ನುಗ್ರೋಹೋ ತಿಳಿಸಿದ್ದಾರೆ.
ಈಗಾಗಲೇ ಪ್ರವಾಹದ ಭೀಕರತೆ ಅಲ್ಪಮಟ್ಟಿಗೆ ಕ್ಷೀಣಿಸಿದ್ದು, ನಾಪತ್ತೆಯಾದವರಿಗೆ ಶೋಧ ಕಾರ್ಯ ಮುಂದುವರೆದಿದೆ ಹಾಗೂ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗುತ್ತಿದೆ.