ಬಾಮಾಕೊ,ಮಾ 18 (MSP): ಪಶ್ಚಿಮ ಆಫ್ರಿಕಾ ದೇಶ ಮಾಲಿಯ ಕೇಂದ್ರಭಾಗದಲ್ಲಿರುವ ಸೇನಾ ಶಿಬಿರದ ಮೇಲೆ ಶಂಕಿತ ಉಗ್ರರು ದಾಳಿ ನಡೆಸಿದ್ದು, ಗುಂಡಿನ ಚಕಮಕಿಯಲ್ಲಿ 21 ಮಂದಿ ಯೋಧರು ಹತ್ಯೆಯಾಗಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿವೆ. ಮೊಪ್ತಿಯ ಪ್ರಾಂತ್ಯದಲ್ಲಿರುವ ಡಿಯೋರಾ ಸೇನಾ ಶಿಬಿರ ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದುಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮೊಪ್ತಿ ವಲಯದಲ್ಲಿರುವ ಡಿಯೂರಾ ಸೇನಾ ಶಿಬಿರಕ್ಕೆ ಕಾರು ಹಾಗೂ ಬೈಕ್ಗಳಲ್ಲಿ ಉಗ್ರರು ನುಗ್ಗಿ ದಾಳಿ ನಡೆಸಿದ್ದಾರೆ.ಉಗ್ರರು ಹಾಗೂ ಭದ್ರತಾ ಪಡೆಯ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದೂ ಸೇನೆ ಮಾಹಿತಿ ನೀಡಿದೆ