ನೆದರ್ಲ್ಯಾಂಡ್,ಮಾ 18 (MSP): ನೆದರ್ಲ್ಯಾಂಡ್ನ ಉಟ್ರೆಚ್ ಎಂಬ ನಗರದಲ್ಲಿ ನ್ಯೂಜಿಲ್ಯಾಂಡ್ ಮಾದರಿಯಲ್ಲಿ ಸೋಮವಾರ ಶೂಟಿಂಗ್ ದಾಳಿ ನಡೆದಿದ್ದು, ಘಟನೆಯಿಂದ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ ಬಂದೂಕುಧಾರಿ ವ್ಯಕ್ತಿಯೋರ್ವ ಗುಂಡಿನ ದಾಳಿ ನಡೆಸಿದ್ದಾಗಿ ಅಲ್ಲಿನ ಸ್ಥಳೀಯ ಮಾಧ್ಯಮ ’ನೆದರ್ಲ್ಯಾಂಡ್ ಟೈಮ್ಸ್ ’ನಲ್ಲಿ ವರದಿಯಾಗಿದೆ.
ನಗರದ ಪಶ್ಚಿಮ ಭಾಗದ 24 ಒಕ್ಟೊಬರ್ಪ್ಲೀನ್ ಎಂಬ ಪ್ರದೇಶದಲ್ಲಿ ಈ ದಾಳಿ ನಡೆದಿದ್ದು , ನೆದರ್ಲ್ಯಾಂಡ್ ಪೊಲೀಸರು ಬೆಳಗ್ಗೆ 11 ಗಂಟೆಗೆ ತಮ್ಮ ಟ್ವಿಟರ್ ಖಾತೆಯಲ್ಲಿ ದಾಳಿಯನ್ನು ದೃಢಪಡಿಸಿದ್ದಾರೆ. ಜನಸಂದಣಿಯಿಂದ ಕೂಡಿರುವ ಪ್ರದೇಶದಲ್ಲಿ ಈ ಗುಂಡಿನ ದಾಳಿ ನಡೆದಿದ್ದು, ಘಟನೆ ಬಳಿಕ ರಸ್ತೆ ರೈಲು ಟ್ರಾಮ್ ಸಂಚಾರ ಸ್ಥಗಿತಗೊಳಿಸಲಾಗಿದೆ.
ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ ಬಂದೂಕುಧಾರಿ ತಪ್ಪಿಸಿಕೊಂಡಿದ್ದು, ಬಂಧನಕ್ಕಾಗಿ ವ್ಯಾಪಕ ಶೋಧ ನಡೆಸಲಾಗುತ್ತಿದೆ. ಈಗಾಗಲೇ ಸ್ಥಳಕ್ಕೆ ಪೊಲೀಸರು ಮತ್ತು ವೈದ್ಯಕೀಯ ಚಿಕಿತ್ಸೆಯ ಹೆಲಿಕಾಪ್ಟರ್ಗಳು ತಲುಪಿವೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.