ನವದೆಹಲಿ,ಮಾ 19 (MSP): ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಸುಮಾರು 13 ಸಾವಿರ ಕೋಟಿ ರೂಪಾಯಿ ಪಂಗನಾಮ ಹಾಕಿ ಇಂಗ್ಲೆಂಡ್ನಲ್ಲಿ ತಲೆಮರೆಸಿಕೊಂಡಿದ್ದ ಉದ್ಯಮಿ ನೀರವ್ ಮೋದಿಯ ಬಂಧನಕ್ಕೆ ಕ್ಷಣಗಣನೆ ಆರಂಭವಾಗಿದೆ. ಬ್ರಿಟನ್ ನ ವೆಸ್ಟ್ ಮಿನಿಸ್ಟರ್ ಕೋರ್ಟ್ ನೀರವ್ ಮೋದಿ ಬಂಧನಕ್ಕೆ ವಾರೆಂಟ್ ಜಾರಿ ಮಾಡಿದೆ. ಹೀಗಿದ್ದರೂ ನೀರವ್ ಜಾಮೀನು ಕೋರಿ ಅರ್ಜಿಸಲ್ಲಿಸಬಹುದಾಗಿದೆ. ಮತ್ತು ಕೋರ್ಟ್ ಷರತ್ತುಬದ್ದ ಜಾಮೀನು ನೀಡುವ ಸಾಧ್ಯತೆಯೂ ಇದೆ.
ನೀರವ್ ಇತ್ತೀಚೆಗೆ 10 ಲಕ್ಷ ಬೆಳೆಬಾಳುವ ಜಾಕೆಟ್ ಧರಿಸಿಕೊಂಡು ಲಂಡನ್ನ ಬೀದಿಗಳಲ್ಲಿ ಕಾಣಿಸಿಕೊಂಡಿದ್ದರು. ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ಶೀಘ್ರದಲ್ಲೇ ಲಂಡನ್ ಗೆ ತೆರಳಲಿದೆ.ಈ ಬೆಳವಣಿಗೆ ಬಗ್ಗೆ ತನಿಖಾಧಿಕಾರಿಗಳು ಹಾಗೂ ಲಂಡನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಹಾಗೂ ಲಂಡನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ತೀವ್ರ ನಿಗಾ ವಹಿಸಿದ್ದಾರೆ.
2018 ರ ಆಗಸ್ಟ್ ನಲ್ಲಿ ನೀರವ್ ಗಡಿಪಾರು ಪ್ರಕ್ರಿಯೆ ಆರಂಭವಾಗಿತ್ತು. ನೀರವ್ ಮೋದಿ ಲಂಡನ್ ನಲ್ಲಿ ಈ ಹಿಂದೆ ಕಾಣಿಸಿಕೊಂಡಿದ್ದ ವಾಸ್ತವ್ಯವನ್ನು ಬದಲಿಸಿದ್ದು, ಇದೀಗ ಭಿನ್ನ ವಿಳಾಸದಲ್ಲಿದ್ದಾರೆ.