ಬೀಜಿಂಗ್,ಮಾ 20(MSP): ಉಗ್ರ ಸಂಘಟನೆಯ ವಿರುದ್ದ ಕಠಿಣ ಕ್ರಮಕ್ಕಾಗಿ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಒತ್ತಡ ಹೆಚ್ಚುತ್ತಿದ್ದರೆ ಆದರೆ ಇತ್ತ ಕಡೆ ಚೀನಾ ಮಾತ್ರ ತನ್ನ ಪರಮಾಪ್ತ ದೇಶ ಪಾಕಿಸ್ತಾನಕ್ಕೆ ಮಿಲಟರಿ ಸಹಾಯಕ್ಕೆ ಮುಂದಾಗಿದ್ದು, ಮಾನವರಹಿತ ವೈಮಾನಿಕ ವಾಹನ ಯುವಿ ರೈನ್ ಬೋ ಸಿಎಚ್ - 4 ,ಮತ್ತು ಸಿಎಚ್- 5 ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದೆ.
ಭಾರತೀಯ ವಾಯುಪಡೆಯ ಯುದ್ದವಿಮಾನಗಳು ಪಾಕಿಸ್ತಾನದ ವಾಯುಪ್ರದೇಶ ಭೇದಿಸಿ ಬಾಲಾಕೋಟ್ ಜೈಷ್ ಮೊಹಮದ್ ಉಗ್ರ ನೆಲೆಗಳನ್ನು ದ್ವಂಸ ಮಾಡಿದ ನಂತರ ದೇಶದ ಭದ್ರತೆಯನ್ನು ಹೆಚ್ಚಿಸಿಕೊಳ್ಳಲು ಪಾಕ್ ಮುಂದಾಗಿದೆ. ಇದರ ಮುಂದುವರಿದ ಭಾಗವಾಗಿ ಡ್ರೋನ್ ಗಳ ಸಂಖ್ಯೆಯನ್ನು ಹೆಚ್ಚಿಸಲು ಪಾಕಿಸ್ತಾನ ತೀರ್ಮಾನಿಸಿದೆ.
ಗುಪ್ತಚರ ಇಲಾಖೆಯ ವರದಿಯ ಪ್ರಕಾರವೂ 'ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಡ್ರೋನ್ ಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದೆ'. ಡ್ರೋಣ್ ಮೂಲಕ ಅವರು ಅಂತರರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಮೇಲೆ ನಿಗಾ ಇಡಬಹುದು ಎನ್ನಲಾಗಿದೆ.
ಈ ಅತ್ಯಾಧುನಿಕ ಡ್ರೋನ್ ಗಳು 400 ಕೆಜಿಯಷ್ಟು ಶಸ್ತ್ರಾಸ್ತ್ರವನ್ನು ಹೊರುವ ಸಾಮರ್ಥ್ಯವಿದ್ದು , ಮಾತ್ರವಲ್ಲದೆ ಇದು ಸುಮಾರು 17 ಸಾವಿರ ಅಡಿಗಳಷ್ಟು ಎತ್ತರದಲ್ಲಿ ಈ ಡ್ರೋನ್ ಗಳು ಹಾರಾಟ ನಡೆಸಲಿವೆ ಎನ್ನಲಾಗಿದೆ. ಈ ಡ್ರೋನ್ ಗಳ ಮೂಲಕ ಭಾರತದ ವಾಯು ಪ್ರದೇಶವನ್ನು ಆಕ್ರಮಿಸಬಹುದು ಎಂದು ಪಾಕ್ ನ ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.