ನವದೆಹಲಿ,ಮಾ 20(MSP): ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಸುಮಾರು 13 ಸಾವಿರ ಕೋಟಿ ರೂಪಾಯಿ ಪಂಗನಾಮ ಹಾಕಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಉದ್ಯಮಿ ನೀರವ್ ಮೋದಿಯ ಲಂಡನ್ ಪೋಲಿಸರು ಬುಧವಾರ ಬಂಧಿಸಿದ್ದು ಶೀಘ್ರದಲ್ಲೇ ಕೋರ್ಟ್ ಗೆ ಹಾಜರುಪಡಿಸುವ ಸಾಧ್ಯತೆ ಇದೆ.
ಭಾರತದ ಮನವಿ ಮೇರೆಗೆ ಕಳೆದ ಮೂರು ದಿನಗಳ ಹಿಂದೆಯಷ್ಟೇ ಬ್ರಿಟನ್ ನ ವೆಸ್ಟ್ ಮಿನಿಸ್ಟರ್ ಕೋರ್ಟ್ ನೀರವ್ ಮೋದಿ ಬಂಧನಕ್ಕೆ ವಾರೆಂಟ್ ಜಾರಿ ಮಾಡಿತ್ತು. ಈ ಹಿನ್ನಲೆಯಲ್ಲಿ ಲಂಡನ್ ಪೊಲೀಸರು ನೀರವ್ ಮೋದಿಯನ್ನು ವಶಕ್ಕೆ ಪಡೆದಿದ್ದಾರೆ. ಇದಲ್ಲದೆ ಇನ್ನು ಎರಡು ಮೂರು ದಿನಗಳಲ್ಲಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರ ಮಾಡುವ ಸಾಧ್ಯತೆಗಳಿವೆ.
ಲಂಡನ್ ನಲ್ಲಿ ದುಬಾರಿ ಮನೆಯಲ್ಲಿ ವಾಸವಾಗಿದ್ದ ನೀರವ್ ಇತ್ತೀಚೆಗೆ 10 ಲಕ್ಷ ಬೆಳೆಬಾಳುವ ಜಾಕೆಟ್ ಧರಿಸಿಕೊಂಡು ಲಂಡನ್ನ ಬೀದಿಗಳಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ಅಲ್ಲಿನ ಮಾಧ್ಯಮ ಪ್ರಸಾರ ಮಾಡಿತ್ತು. ಇದೇ ಆಧಾರದಲ್ಲಿ ಭಾರತದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಲಂಡನ್ ಅಧಿಕಾರಿಗಳನ್ನ ಸಂಪರ್ಕಿಸಿ ನೀರವ್ ಮೋದಿ ಬಂಧನಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದರು.