ನ್ಯೂಜಿಲ್ಯಾಂಡ್,ಮಾ25(AZM): 50 ಮಂದಿಯನ್ನು ಬಲಿ ಪಡೆದ ನ್ಯೂಜಿಲ್ಯಾಂಡ್ ಮಸೀದಿ ದಾಳಿಯ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಪ್ರಧಾನಿ ಜಸಿಂದಾ ಆಡ್ರನ್ ಆದೇಶಿಸಿದ್ದಾರೆ.
ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದ ಹತ್ಯಾಕಾಂಡವನ್ನು ಖಂಡಿಸಿದ ಜೆಸಿಂದಾ, ಸರ್ಕಾರದಿಂದಲೇ ವಿಶೇಷ ತಂಡವನ್ನು ರಚಿಸಿ ಉನ್ನತಾಧಿಕಾರಿಗಳನ್ನು ನೇಮಕ ಮಾಡಿ ಶೀಘ್ರದಲ್ಲೇ ಮಸೀದಿ ದುರಂತದ ಯಾವ ಸಂಘಟನೆಗಳ ಕೈವಾಡವಿದೆ ಎಂಬ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದಾರೆ.
ಏಕಾಏಕಿ ಮಸೀದಿ ಮೇಲೆ ಓರ್ವ ದಾಳಿ ನಡೆಸಿ ಬರೋಬ್ಬರಿ 50 ಮಂದಿಯನ್ನು ಬಲಿ ತೆಗೆಯಲು ಕಾರಣವೇನು? ಹಾಗೂ ಇದರ ಹಿಂದೆ ಯಾರ ಕೈವಾಡವಿದೆ? ಎಂಬುವುದರ ಬಗ್ಗೆ ನ್ಯಾಯಾಲಯ ಸುದೀರ್ಘ ತನಿಖೆ ನಡೆಸುತ್ತಿದೆ.
ಮಾ.15 ರಂದು ಕಪ್ಪು ಬಟ್ಟೆ ತೊಟ್ಟು ಹೆಲ್ಮೆಟ್ ಧರಿಸಿದ್ದ ವ್ಯಕ್ತಿ ಕೈಯಲ್ಲಿ ಮೆಷೀನ್ ಗನ್ ಹಿಡಿದು ಮಸ್ಜಿದ್ ಅಲ್ ನೂರ್ಗೆ ನುಗ್ಗಿ ಪ್ರಾರ್ಥನೆಯಲ್ಲಿ ನಿರತರಾಗಿದ್ದವರ ಮೇಲೆ ಗುಂಡಿನ ಮಳೆಗರೆದಿದ್ದ.ಇದನ್ನು ಆ ನರರಾಕ್ಷಸ ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಮಾಡಿದ್ದು,ಈ ವೀಡಿಯೋವನ್ನು ಹಂಚಿಕೊಳ್ಳದಂತೆ ಪೊಲೀಸರು ಸೂಚಿಸಿದ್ದಾರೆ. ಈ ದಾಳಿಯಲ್ಲಿ 50 ಮಂದಿ ಮೃತಪಟ್ಟಿದ್ದರು.