ಇಸ್ಲಾಮಾಬಾದ್,ಮಾ 26(MSP): ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಮೂತ್ರಪಿಂಡದ ಸಮಸ್ಯೆ ಉಲ್ಬಣಿಸಿ, ತೀವ್ರ ಅನಾರೋಗ್ಯದ ಸಮಸ್ಯೆ ಕಾಡುತ್ತಿರುವ ಕಾರಣ ಚಿಕಿತ್ಸೆಗಾಗಿ ಪಾಕ್ ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದೆ.
ಅರವತ್ತೊಂಬತ್ತು ವರ್ಷದ ನವಾಜ್ ಷರೀಫ್ ಕಳೆದ ವರ್ಷದ ಡಿಸೆಂಬರ್ ನಿಂದ ಜೈಲಿನಲ್ಲಿ ನಲ್ಲಿದ್ದು , ಅಲ್ ಅಜಿಜಿಯಾ ಸ್ಟೀಲ್ ಮಿಲ್ಸ್ ಲಂಚ ಪ್ರಕರಣದಲ್ಲಿ ಅವರಿಗೆ ಏಳು ವರ್ಷದ ಜೈಲು ಶಿಕ್ಷೆಯಾಗಿದೆ.
ಜೈಲಿನಲ್ಲಿರುವ ನವಾಜ್ ಷರೀಫ್ ಅವರು ಮೂತ್ರಪಿಂಡದ ಸಮಸ್ಯೆ ಉಲ್ಬಣಿಸಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ ಜಾಮೀನು ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇಸ್ಲಾಮಾಬಾದ್ ಹೈಕೋರ್ಟ್ ಫ. 25ರಂದು ತಿರಸ್ಕರಿಸಿತ್ತು. ಆ ಬಳಿಕ ಪಾಕ್ ಮಾಜಿ ಪ್ರಧಾನಿ ಸುಪ್ರೀಂ ಗೆ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಅರ್ಜಿ ವಿಚಾರಣೆ ನಡೆಸಿದ ಪಾಕ್ ಸುಪ್ರೀಂ ಕೋರ್ಟ್, ವೈದ್ಯಕೀಯ ಚಿಕಿತ್ಸೆಗಾಗಿ ಆರು ವಾರಗಳ ಕಾಲ ನವಾಜ್ ಷರೀಫ್ ಅವರಿಗೆ ಜಾಮೀನು ಮಂಜೂರು ಮಾಡಿದೆ. ಇದರೊಂದಿಗೆ ದೇಶ ಬಿಟ್ಟು ಎಲ್ಲೂ ಪ್ರಯಾಣಿಸುವಂತಿಲ್ಲ ಎಂದು ಷರತ್ತು ವಿಧಿಸಿದೆ.