ನೈಜಿರಿಯಾ,ಮಾ27(AZM):ಇಬ್ಬರು ಮಹಿಳಾ ಆತ್ಮಾಹುತಿ ಬಾಂಬರ್ ಗಳು ನಡೆಸಿದ ದಾಳಿಗೆ ಇಬ್ಬರು ಬಾಂಬರ್ ಗಳು ಸೇರಿದಂತೆ 10 ಮಂದಿ ನಾಗರಿಕರು ಮೃತಪಟ್ಟು, ಏಳು ಮಂದಿ ಗಾಯಗೊಂಡಿರುವ ಘಟನೆ ನೈಜೀರಿಯಾದ ನೈಜರ್ ನಲ್ಲಿ ಇಂದು ನಡೆದಿದೆ.
ಇಬ್ಬರು ಮಹಿಳೆಯರು ತಮ್ಮನ್ನು ತಾವೇ ಸ್ಫೋಟಿಸಿಕೊಂಡಿದ್ದು, ಒಬ್ಬ ಬಂದೂಕುಧಾರಿ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.
ಇದು, ಬೊಕೋ ಹರಾಮ್ ಉಗ್ರ ಸಂಘಟನೆಯ ಕೃತ್ಯ ಎಂದು ತಿಳಿದುಬಂದಿದೆ. ಒಬ್ಬ ಮಹಿಳಾ ಬಾಂಬರ್ ಪೊಲೀಸ್ ಅಧಿಕಾರಿಯೊಬ್ಬರ ಮನೆಯಲ್ಲೇ ಸ್ಫೋಟಿಸಿಕೊಂಡಿದ್ದರೆ, ಮತ್ತೊಬ್ಬ ಬಾಂಬರ್ ಪೊಲೀಸ್ ನಾಕಾಬಂದಿ ಹಾಗೂ ಟೌನ್ ಹಾಲ್ ಮಧ್ಯೆ ಸ್ಫೋಟಿಸಿಕೊಂಡಿದ್ದಾಗಿ ತಿಳಿದುಬಂದಿದೆ.
ಸ್ಥಳೀಯರೊಬ್ಬರು ಮಾಹಿತಿ ಪ್ರಕಾರ, ಹಲವಾರು ಮನೆಗಳು ಸುಟ್ಟುಹೋಗಿವೆ. ಪೊಲೀಸ್ ಕ್ಯಾಂಪ್ ನಲ್ಲಿದ್ದ ಗಾಯಾಳು ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮತ್ತೊಬ್ಬ ಶಸ್ತ್ರಧಾರಿ ಬೊಕೋಹರಾಮ್ ಸದಸ್ಯ ಡೈಲೆರಮ್ ಜಿಲ್ಲೆಯಲ್ಲಿ ದಾಳಿ ನಡೆಸಿದ್ದು, ಸಾರ್ವಜನಿಕರನ್ನು ಕೊಂದಿದ್ದಾನೆ.