ವಿಶ್ವಸಂಸ್ಥೆ,ಮಾ 28(MSP): ಜೈಷ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ನನ್ನು ಬ್ಲಾಕ್ ಲಿಸ್ಟ್ ಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ, ಅಮೇರಿಕಾ ಕರಡು ನಿರ್ಣಯವನ್ನು ಸಲ್ಲಿಕೆ ಮಾಡಿದೆ.
ಅಮೆರಿಕಾದ ಕರಡು ಪ್ರತಿಯಲ್ಲಿ ಭಾರತದ ಮೇಲೆ ನಡೆದ ಪುಲ್ವಾಮಾ ದಾಳಿಯನ್ನು ಖಂಡಿಸಿಲಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಈಗಾಗಲೇ ಬ್ಲಾಕ್ ಲಿಸ್ಟ್ ಗೆ ಸೇರಿಸಿಲಾಗಿರುವ ಅಲ್ ಖೈದಾ ಹಾಗೂ ಇಸ್ಲಾಮಿಕ್ ಸ್ಟೇಟ್ ನಿರ್ಬಂಧದ ಜೊತೆಯಲ್ಲಿ ಜೈಷ್ ಮಸೂದ್ ಅಜರ್ ಸೇರ್ಪಡೆಗೆ ತಿಳಿಸಲಾಗಿದೆ
ಉಗ್ರಗ್ರಾಮಿ ಸಂಘಟನೆ ಮುಖ್ಯಸ್ಥ ಅಜರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಸುವ ಪ್ರಯಾಣಕ್ಕೆ ನಿಷೇಧ ಹೇರುವುದು ಹಾಗೂ ಆತನ ಆಸ್ತಿ ಹಾಗೂ ಅವರ ಬಳಿ ಇರುವ ಶಸ್ತ್ರಾಸ್ರಗಳನ್ನು ವಶಪಡಿಸಿಕೊಳ್ಳಬೇಕು ಎಂದು ಕರಡು ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.
ಅಜರ್ ನನ್ನು ನಿಷೇಧ ಮಾಡಲು ಫ್ರಾನ್ಸ್ ಮತ್ತು ಬ್ರಿಟನ್ ದೇಶಗಳು ವಿಶ್ವಸಂಸ್ಥೆಯಲ್ಲಿ ಸಮ್ಮತಿ ನೀಡಿದೆ. ಅಜರ್ನನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ನಾಲ್ಕು ಬಾರಿ ವಿಶ್ವಸಂಸ್ಥೆಯಲ್ಲಿ ಮನವಿ ಮಾಡಲಾಗಿದ್ದು ಪ್ರತಿ ಭಾರಿಯೂ ಇದಕ್ಕೆ ಚೀನಾ ಅಡ್ಡಗಾಲು ಹಾಕುತ್ತಿದೆ.